ಮುಡಾ ಹಗರಣದ ಪಾರದರ್ಶಕ ತನಿಖೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು-ಸಂಸದ ಕೋಟ
ಉಡುಪಿ ಸೆ.26(ಉಡುಪಿ ಟೈಮ್ಸ್ ವರದಿ): ಮುಡಾ ಹಗರಣದ ಪಾರದರ್ಶಕ ತನಿಖೆ ಆಗಬೇಕೆಂದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ತಾನು ಏನು ಹೇಳಿಕೆ ಕೊಟ್ಟಿದ್ದೇನೆ ಎಂಬುದನ್ನು ನೋಡಲಿ ಪಾರದರ್ಶಕ ತನಿಖೆ ನಡೆಯಲು ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದಿದ್ದರು. ಅಂದು ಹೇಳಿದ ಮಾನದಂಡವನ್ನೇ ಈಗ ಪಾಲಿಸಬೇಕು. ಮುಡಾ ಹಗರಣದ ಪಾರದರ್ಶಕ ತನಿಖೆ ಆಗಬೇಕೆಂದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದಿದ್ದಾರೆ.
ಹಿಂದೆ ಹೇಳಿದ ಹೇಳಿಕೆಯನ್ನು ನೀವು ಅನುಷ್ಠಾನ ಮಾಡೋದಿಲ್ವಾ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಇಂದು ಬೃಹತ್ ಪ್ರತಿಭಟನೆ ಮಾಡುತ್ತಿದೆ ನ್ಯಾಯಾಂಗ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಒಂದೆರಡು ದಿನಗಳಲ್ಲಿ ಬಿಜೆಪಿ ಅಧ್ಯಕ್ಷರು ಕುಳಿತು ಮುಂದಿನ ಹೋರಾಟ ಹೇಗೆ ಎಂದು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ಜೆಡಿಎಸ್‌ಗೆ ಯಾವ ನೈತಿಕತೆ ಇದೆ ಎಂಬ ಸಿದ್ದರಾಮಯ್ಯ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಅಂತ ಕುಮಾರಸ್ವಾಮಿಗೆ ಅನಿಸಿರಬೇಕು ಹಾಗಾಗಿ ಅವರು ರಾಜೀನಾಮೆ ಕೇಳುವುದಿಲ್ಲ ಎಂದಿರಬಹುದು. ರಾಜ್ಯದ 14 ಜಿಲ್ಲೆಯ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಬಂದ್ ಆಗಿದೆ. ಆಡಳಿತ ಎಲ್ಲಿಗೆ ಬಂದು ನಿಂತಿದೆ ಅಂತ ಗೊತ್ತಾಗುತ್ತೆ. ರಾಜ್ಯದ್ಯಂತ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಹೊರಟಿದೆ. 12 ಲಕ್ಷ ಪಡಿತರ ಕಾರ್ಡುಗಳು ರದ್ದಾಗುವ ಸಾಧ್ಯತೆ ಇದೆ ಇದು ಬಡವರಿಗೆ ಮಾಡುವ ವಂಚನೆ ಎಂದಿದ್ದಾರೆ.
ಹೈ ಕೋರ್ಟ್ ನ್ಯಾಯಮೂರ್ತಿಗಳ ತೀರ್ಪನ್ನು ಸ್ವೀಕರಿಸುವುದು ಸಮಾಜದ ಹೊಣೆಗಾರಿಕೆ ಅಭಿಪ್ರಾಯ ಭೇದಗಳಿದ್ದರೆ ಮೇಲ್ಮನವಿ ಮಾಡಬಹುದು ನ್ಯಾಯಮೂರ್ತಿಗಳನ್ನ ಟೀಕೆ ಮಾಡುವುದು ಸರಿಯಲ್ಲ. ರಾಜಕೀಯ ಪ್ರೇರಿತ ಎಂದು ಒಬ್ಬ ಮಂತ್ರಿ ಹೇಳುತ್ತಿದ್ದಾರೆ. ಇಂಥ ಮಂತ್ರಿಯನ್ನಿಟ್ಟು ಕೊಂಡು ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕಿಂತ ಭಿನ್ನವಾದ ಹೇಳಿಕೆ ಕೊಡುವ ಸಾಧ್ಯತೆ ಇಲ್ಲ. ವಿಧಾನ ಸೌಧದಲ್ಲಿ ನಿಂತು ಪಾಕಿಸ್ತಾನಕ್ಕೆ ಜೈ ಎಂದವರು ನ್ಯಾಯಮೂರ್ತಿಗಳು ಹೇಳುವ ಮಾತನ್ನ ಸ್ವೀಕರಿಸಲು ಸಾಧ್ಯವೇ. ಮುಖ್ಯಮಂತ್ರಿಗಳು ಇಂತಹ ಹೇಳಿಕೆಯನ್ನು ಸಹಿಸ್ತಾರಾ? ಎಂದು ಟೀಕಿಸಿದ್ದಾರೆ.