ಮಣಿಪಾಲ: ವಿಶ್ವದ ಅಗ್ರ 2% ವಿಜ್ಞಾನಿಗಳಲ್ಲಿ ಮಾಹೆಯ 36 ಸಂಶೋಧಕರು

ಮಣಿಪಾಲ, ಸೆ.19: ಇತ್ತೀಚಿನ ಉಲ್ಲೇಖದ ಶ್ರೇಯಾಂಕಗಳ ಪ್ರಕಾರ ವಿಶ್ವದಾದ್ಯಂತದ ಅಗ್ರ 2% ವಿಜ್ಞಾನಿಗಳಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ )ನ 36 ಪ್ರಸಿದ್ಧ ಸಂಶೋಧಕರು ಗುರುತಿಸಲ್ಪಟ್ಟಿದ್ದಾರೆ.

ಹಿಂದಿನ ವರ್ಷದಲ್ಲಿ ಜಾಗತಿಕ ಸಂಶೋಧನೆಗೆ ಅವರು ನೀಡಿದ ಮಹೋನ್ನತ ಕೊಡುಗೆಗಳನ್ನು ಗೌರವಿಸುವ ಈ ಮನ್ನಣೆಯು ವಿದ್ವಾಂಸ ಪ್ರೊ. ಜಾನ್ ಪಿ.ಎ ಐಯೋನಿಡಿಸ್ ಬಿಡುಗಡೆ ಮಾಡಿದ “ಅಪ್‍ಡೇಟ್ ಮಾಡಿದ ಸೈನ್ಸ್-ವೈಡ್ ಆಥರ್ ಡೇಟಾಬೇಸ್ ಆಫ್ ಸ್ಟ್ಯಾಂಡರ್ಡ್ ಸೈಟೇಶನ್ ಇಂಡಿಕೇಟರ್‍ಗಳಿಗಾಗಿ ಆಗಸ್ಟ್ 2024 ರ ಡೇಟಾ ಅಪ್‍ಡೇಟ್” ಅನ್ನು ಆಧರಿಸಿದೆ. ಹೆಚ್ಚುವರಿಯಾಗಿ, ಆರು ಪ್ರಸಿದ್ಧ ಮಾಹೆ ಸಂಶೋಧಕರು ತಮ್ಮ ಕ್ಷೇತ್ರಗಳಿಗೆ ತಮ್ಮ ಗಮನಾರ್ಹ ವೃತ್ತಿಜೀವನದ ಕೊಡುಗೆಗಳಿಗಾಗಿ ಶ್ಲಾಘನೆ ಪಡೆದಿದ್ದಾರೆ.

ಈ ಸಾಧನೆಯು ಮಾಹೆಯ ಶೈಕ್ಷಣಿಕ ಸಮುದಾಯದ ನಿರಂತರ ಸಮರ್ಪಣೆ, ನಾವೀನ್ಯತೆ ಮತ್ತು ಶ್ರೇಷ್ಟತೆಗೆ ಸಾಕ್ಷಿಯಾಗಿದೆ. 2023ರಲ್ಲಿ ವಿಶ್ವವಿದ್ಯಾನಿಲಯದ 19 ಸಂಶೋಧಕರನ್ನು ಗುರುತಿಸಿ ಗೌರವಿಸಲಾಗಿತ್ತು ಈ ವರ್ಷ ಗುರುತಿಸಲ್ಪಟ್ಟ ವಿದ್ವಾಂಸರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ.

ಈ ಬಗ್ಗೆ ಮಾಹೆ ಮಣಿಪಾಲದ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ವಿಎಸ್‍ಎಂ (ನಿವೃತ್ತ) ಯವರು ಮಾತನಾಡಿ, “ಇದು ಮಾಹೆಯ ಗಮನಾರ್ಹ ಸಾಧನೆಯಾಗಿದೆ ಮತ್ತು ನಮ್ಮ ಸಂಶೋಧಕರ ನಿರಂತರ ಜ್ಞಾನದ ಅನ್ವೇಷಣೆಯ ಪ್ರತಿಬಿಂಬವಾಗಿದೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ವಿಶ್ವವಿದ್ಯಾನಿಲಯದ ಸ್ಥಾನವನ್ನು ಹೆಚ್ಚಿಸುವುದಲ್ಲದೆ ಜಾಗತಿಕ ಸಂಶೋಧನೆ ಮತ್ತು ನಾವೀನ್ಯತೆಯ ಗಡಿಗಳನ್ನು ಮೀರಿ ನಿಲ್ಲುತ್ತದೆ. ನಾವೀನ್ಯ ಸಂಶೋಧನೆಯನ್ನು ಬೆಂಬಲಿಸಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ಶೈಕ್ಷಣಿಕ ವಾತಾವರಣವನ್ನು ಉತ್ತೇಜಿಸಲು ನಾವು ಸದಾ ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಮತ್ತು ಮಾನ್ಯತೆ ಪಡೆದ ವಿದ್ವಾಂಸರ ಸಂಪೂರ್ಣ ಪಟ್ಟಿಯನ್ನು https://elsevier. digitalcommonsdata.com/ datasets/btchxktzyw/7 ನಲ್ಲಿ ವೀಕ್ಸಿಸಬಹುದು ಎಂದು ಮಾಹೆಯ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!