ಅಂಬಾಗಿಲು- ಗುಂಡಿಬೈಲ್‌ನಿಂದ ಉಡುಪಿಗೆ ಹೋಗದ ಬಸ್: ಸಿಬ್ಬಂದಿಗಳಿಗೆ ಮನವಿ

ಉಡುಪಿ ಸೆ.18(ಉಡುಪಿ ಟೈಮ್ಸ್ ವರದಿ):  ಅಂಬಾಗಿಲು ಗುಂಡಿ ಬೈಲ್ ನಿಂದ ಉಡುಪಿಗೆ ಹೋಗುವ ಪರವಾನಿಗೆ ಇದ್ದರೂ ಹೋಗದ ಬಸ್ಸನ್ನು ತಡೆದು ನಿಗಧಿತ ಮಾರ್ಗದಲ್ಲಿ ಚಲಾಯಿಸುವಂತೆ ಸಿಬ್ಬಂದಿಗಳಿಗೆ ಮನವಿ ಮಾಡಿಕೊಳ್ಳಲಾಯಿತು.

ಅಂಬಾಗಿಲು ಗುಂಡಿ ಬೈಲ್ ನಿಂದ ಉಡುಪಿಗೆ ಹೋಗುವ ಪರವಾನಿಗೆ ಇದ್ದರೂ ಬಸ್ಸುಗಳು ಅಂಬಾಗಿಲು ನಿಟ್ಟೂರು ಬನ್ನಂಜೆಯಿಂದ ಉಡುಪಿಗೆ ಹಾದು ಹೋಗುತ್ತಿದ್ದವು. ಆದ್ದರಿಂದ ಅಂಬಾಗಿಲು ಗುಂಡಿಬೈಲಿನ ಜನರಿಗೆ 15 ವರ್ಷಗಳಿಂದ ಬಸ್ಸಿನ ಸಮಸ್ಯೆ ಕಾಡುತ್ತಿತ್ತು ಹಾಗಾಗಿ ಇಂದು ಬೆಳಿಗ್ಗೆ ಬಸ್ಸುಗಳನ್ನು ಅಂಬಾಗಿಲು ಜಂಕ್ಷನ್ ನಲ್ಲಿ ನಿಲ್ಲಿಸಿ ಬಸ್ಸುಗಳಿಗೆ ನಾಮಫಲಕ ಅಳವಡಿಸಿ ಇನ್ನು ಮುಂದೆ ಗುಂಡಿಬೈಲು ಕಲ್ಸಂಕದಿಂದ ಉಡುಪಿಗೆ ಹಾದು ಹೋಗುವಂತೆ ಬಸ್ ಸಿಬ್ಬಂದಿಯೊಂದಿಗೆ ವಿನಂತಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಆರ್ ಟಿ ಓ ಅಧಿಕಾರಿಗಳು ,ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಕಕ್ಕುಂಜೆ ವಾರ್ಡಿನ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಕರಂಬಳ್ಳಿ ವಾರ್ಡ್ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!