ಮಣಿಪಾಲ: ಮಾಹೆಯಲ್ಲಿ 5 ನೇ ರಾಷ್ಟ್ರೀಯ ಸಮ್ಮೇಳನ
ಮಣಿಪಾಲ, ಸೆ.18(ಉಡುಪಿ ಟೈಮ್ಸ್ ವರದಿ): ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ವತಿಯಿಂದ ಇಂದು ಡಾ.ಟಿ.ಎಂ.ಎ ಪೈ ಸಭಾಂಗಣದಲ್ಲಿ ನಡೆದ ಸಾಮಾಜಿಕ ಬದಲಾವಣೆಯಲ್ಲಿ ಯುವಜನತೆ ಪಾತ್ರ ಕುರಿತು 5ನೇ ರಾಷ್ಟ್ರೀಯ ಸಮ್ಮೇಳ ಸಂಪನ್ನಗೊಂಡಿತು.
ಈ ವೇಳೆ ಮಾತನಾಡಿದ ಎನ್‌ಎಸ್‌ಎಸ್ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಡಿ.ಕಾರ್ತಿಗ್ವಾನ್ ಅವರು, ಸಾಮಾಜಿಕ ಬದಲಾವಣೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಸಾಮೂಹಿಕ ಪ್ರಯತ್ನವನ್ನು ಶ್ಲಾಘಿಸಿದರು. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಭಾರತ್ ಪೋರ್ಟಲ್ ಸೈಬರ್ ಭದ್ರತೆ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಯುವಜನರಿಗೆ ವೈವಿಧ್ಯಮಯ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿದೆ, ಅನುಭವದ ಕಲಿಕೆ ಮತ್ತು ಸ್ವಯಂಸೇವಾ ಸೇವೆಯನ್ನು ಉತ್ತೇಜಿಸುತ್ತದೆ ಎಂದರು.
ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದಲ್ಲಿ 600 ಕ್ಕೂ ಹೆಚ್ಚು ಭಾಗವಹಿಸಿದ್ದರು , 20 ಕ್ಕೂ ಹೆಚ್ಚು ಮಾಹೆಯೇತರ ಸಂಸ್ಥೆಗಳಿಂದ ಕ್ರಿಯಾತ್ಮಕ ಯುವ ನಾಯಕರು, ಬದಲಾವಣೆ ಬಯಸುವ ಯುವಕರು ಮತ್ತು ಯುವ ಸಾಮಾಜಿಕ ಸ್ವಯಂ ಸೇವಕರು ಭಾಗವಹಿಸಿದ್ದರು. ಎನ್ ಎಸ್ ಎಸ್ ಬೆಂಗಳೂರಿನ ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕರಾದ ಡಿ ಕಾರ್ತಿಗೆಯನೆ ರವರು ಮುಖ್ಯ ಅತಿಥಿಗಳಾಗಿ ಸಮ್ಮೇಳನದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಶಂಕರ ಮಹಾಲಿಂಗಂ, ಗ್ಲೋಬಲ್ ಹೆಡ್ – ಸಿಎಸ್ಆರ್, ಫಸ್ಟ್ಸೋರ್ಕ್, ಹರೀಶ್ ದೇಶಿಷ್ಠ ಕುಲಕರ್ಣಿ, ಮ್ಯಾನೇಜರ್ – ಸಿಎಸ್ಆರ್ ಮತ್ತು ಲೀಡ್-ಗ್ಲೋಬಲ್, ಉದ್ಯೋಗಿ ಸ್ವಯಂಸೇವಕ ಕಾರ್ಯಕ್ರಮ, ಟಾಟಾ ಕಮ್ಯುನಿಕೇಷನ್ಸ್, ಕ್ಯಾಪ್ಟನ್ ಶಾಂತಿ ಎಸ್, ಹಿರಿಯ ಕಾರ್ಯಕ್ರಮ ನಿರ್ದೇಶಕರು, ಇನ್ಫೋಸಿಸ್ ಫೌಂಡೇಶನ್, ಮಿಶಾ ಭಟ್, ಹಿರಿಯ ಉಪಾಧ್ಯಕ್ಷರು, ಐ ವಾಲಂಟೀರ್ , ಸತ್ಯಂ ಗಂಭೀರ್, ಸಹ ಸಂಸ್ಥಾಪಕರು , ಪ್ಲಾಟ್‌ಫಾರ್ಮ್ ಕಾಮನ್ಸ್, ಶ್ರೀ ಉತ್ಕರ್ಷ್ ಸಿನ್ಹಾ, ವ್ಯವಸ್ಥಾಪಕ ನಿರ್ದೇಶಕರು, ಬ್ಯೂಕೋಲಿಕ್ ಕೈಲಾಶ್, ನವನೀತ್ ಗಣೇಶ್ ಕನ್ಸಲ್ಟಾಂಟ್, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್, ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ವಿಎಸ್‌ಎಂ (ನಿವೃತ್ತ), ವೈಸ್ ಚಾನ್ಸೆಲರ್ ಮಾಹೆ , ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪ್ರವೀಣ್ ಕುಮಾರ್, ಸಂಚಾಲಕ ಡಾ. ಅನುಪ್ ನಹಾ, ಸಹ ಸಂಚಾಲಕ ಡಾ. ಅಭಿಷೇಕ್ ಚತುರ್ವೇದಿ ಮತ್ತು ವಿದ್ಯಾರ್ಥಿ ಕಾರ್ಯದರ್ಶಿಗಳಾದ ಎಂ.ಎಸ್.ಮನಸ್ವಿನಿ ಯು ಮತ್ತು ಅನಿಕೇತ್ ಪೂಜಾರಿ ಉಪಸ್ಥಿತರಿದ್ದರು.