ಮಣಿಪಾಲ: ಎಕ್ಸ್ ಟ್ರೀಮ್ ಪವರ್ ಜಿಮ್‌ನಿಂದ ರಕ್ತದಾನ ಶಿಬಿರ

ಮಣಿಪಾಲ ಸೆ.03(ಉಡುಪಿ ಟೈಮ್ಸ್ ವರದಿ): ಎಕ್ಸ್ ಟ್ರೀಮ್ ಪವರ್ ಜಿಮ್ ಬನ್ನಂಜೆ-ಉಡುಪಿ ಹಾಗೂ ಕೆಎಂಸಿ ಆಸ್ಪತ್ರೆಯ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಆಸ್ಪತ್ರೆಯ ರಕ್ತನಿಧಿ ವಿಭಾಗದಲ್ಲಿ ನಡೆಯಿತು.

ಶಿಬಿರದಲ್ಲಿ ಒಟ್ಟು 55 ಜನ ರಕ್ತದಾನಿಗಳು ರಕ್ತದಾನ ಮಾಡಿ, ರಕ್ತದಾನದ ಮಹತ್ವವನ್ನು ಸಾರಿದರು

ಈ ಸಂದರ್ಭದಲ್ಲಿ ಕೆಎಂಸಿಯ ರಕ್ತ ನಿಧಿ ವಿಭಾಗದ  ವೈದ್ಯಾದಿಕಾರಿ ಡಾ.ಸಂಪ್ರಿತ, ಟೆಕ್ನಿಕಲ್ ಸುಪರ್ ವೈಸರ್ ಶ್ರೀ ವಿಶ್ವೇಶ್, ಎಕ್ಸ್ ಟ್ರೀಮ್ ಪವರ್ ಜಿಮ್ ಬನ್ನಂಜೆ ಉಡುಪಿ ಇದರ ಮಾಲಕ ನಿತ್ಯಾನಂದ ಕೋಟ್ಯಾನ್  ಹಾಗೂ ಗಣೇಶ್ ಪಡುಕರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!