ಉಡುಪಿ: ಶೇರು ಮಾರುಕಟ್ಟೆಯಲ್ಲಿ ಲಾಭಾಂಶದ ಆಮಿಷ- ವ್ಯಕ್ತಿಗೆ 16.10 ಲ.ರೂ ವಂಚನೆ
ಉಡುಪಿ ಸೆ.2(ಉಡುಪಿ ಟೈಮ್ಸ್ ವರದಿ): ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭಗಳಿಸುವ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ 16.10 ಲ.ರೂ ವಂಚಿಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿಯ ಬೈಲಕೆರೆ ನಿವಾಸಿ ಎಸ್. ಅಬ್ದುಲ್ ರಹೀಮಾನ್ ಸಾಹೇಬ್ ಅವರು, ಶೇರು ಮಾರುಕಟ್ಟೆಯ ಬಗ್ಗೆ Youtube ಮತ್ತು ಆನ್‌ಲೈನ್ ನಲ್ಲಿ ಸರ್ಚ್ ಮಾಡುತ್ತೀರುವಾಗ Marval Stock K6 ಎಂಬ WhatsApp ಗ್ರೂಪ್ ನ ಲಿಂಕ್ ಸಿಕ್ಕಿತ್ಯು. ಈ ಗ್ರೂಪ್‌ನಲ್ಲಿದ್ದ ಅಪರಿಚಿತ ವ್ಯಕ್ತಿ ಶೇರು ಮಾರುಕಟ್ಟೆಯ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿದ್ದನು. ಇದನ್ನು ನಂಬಿದ ಎಸ್. ಅಬ್ದುಲ್ ರಹೀಮಾನ್ ಸಾಹೇಬ್ ಅವರು ಆರೋಪಿ ತಿಳಿಸಿದ ಬ್ಯಾಂಕ್ ಖಾತೆಗೆ ಒಟ್ಟು ರೂ. 16,10,000/- ನಗನ್ನು ವರ್ಗಾವಣೆ ಮಾಡಿದ್ದರು. ಆದರೆ ಆ ಬಳಿಕ ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ನೀಡದೇ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.