ಆದರ್ಶ ಆಸ್ಪತ್ರೆ-ಸಾಂಕ್ರಮಿಕ ರೋಗಗಳ ಬಗ್ಗೆ ಬೀದಿ ನಾಟಕ

ಉಡುಪಿ ಆ. 31: ಆದರ್ಶ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಉಡುಪಿ ಇದರ ಪ್ರಥಮ ವರ್ಷದ ಅಲೈಡ್ ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿ ಸಮುದಾಯದಲ್ಲಿ ಡೆಂಗ್ಯೂ, ಮಲೇರಿಯಾ, ಟಿಬಿ ಮತ್ತು ಹೃದ್ರೋಗಗಳ ಕುರಿತು ಜಾಗೃತಿ ಮೂಡಿಸಿದರು.

ಈ ಜಾಗೃತಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪ್ರಯತ್ನವನ್ನು ಆದರ್ಶ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ ಜಿ ಎಸ್ ಚಂದ್ರಶೇಖರ್ ಶ್ಲಾಘಿಸಿದರು, ವಿಮಲಾ ಚಂದ್ರಶೇಖರ ಬೀದಿ ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆದರ್ಶ ಅಲೈಡ್ ಹೆಲ್ತ್ ಸೈನ್ಸಸ್ ನ ಪ್ರಾಂಶುಪಾಲ ಪ್ರೊ. ರವಿಕುಮಾರ್ ಟಿ.ಎನ್, ಶ್ರೀ ಆದರ್ಶ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸುದಿನ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!