ಮಣಿಪಾಲ: ಅವಧಿಗಿಂತ ಮೊದಲು ಬಾರ್ ಬಂದ್‌ಗೆ ಪೊಲೀಸ್ ನೋಟೀಸ್‌ಗೆ ತಡೆಯಾಜ್ಞೆ

ಮಣಿಪಾಲ ಆ.27(ಉಡುಪಿ ಟೈಮ್ಸ್ ವರದಿ): ಠಾಣಾ ವ್ಯಾಪ್ತಿಯ ಮದ್ಯ ಮಾರಾಟ ಸನ್ನದುಗಳನ್ನು ರಾತ್ರಿ 10.00 ಗಂಟೆಗೆ ಬಂದ್ ಮಾಡುವಂತೆ ಹಾಗೂ ಯಾವುದೇ ಡಿಜೆ, ಲೌಡ್ ಸ್ಪೀಕರ್ , ಸೌಂಡ್ ಬಾಕ್ಸ್ ಗಳನ್ನು ಬಳಸದಂತೆ ಹಾಗೂ ಮನೋರಂಜನೆ ಮಾಡದಂತೆ ಪೊಲೀಸರು ನೀಡಿದ್ದ ನೋಡಿಸ್‌ಗೆ ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ತಡೆಯಾಜ್ಞೆ ತಂದಿದೆ.

ಈ ವಿಚಾರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅಸೋಸಿಯೇಷನ್, ಮಣಿಪಾಲ ಪ್ರದೇಶದಲ್ಲಿ ಸಿಎಲ್-2, ಸಿಎಲ್-4, ಸಿಎಲ್-9 ಮತ್ತು ಸಿಎಲ್-7 ಸನ್ನದುಗಳಿರುತ್ತದೆ ಮತ್ತು ವ್ಯವಹಾರದ ಸಮಯ / 10.30 PM /12.00 PM/11.30 PM ಮತ್ತು 12.00 ಗಂಟೆವರೆಗೆ ಇರುತ್ತದೆ.

ಪೊಲೀಸ್ ಇಲಾಖೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ಒಳಾಡಳಿತ ಇಲಾಖೆ, ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೆ, ಅಬಕಾರಿ ಆಯುಕ್ತರಿಗೆ ಮತ್ತು ಉಡುಪಿ ಜಿಲ್ಲಾಧಿಕಾರಿಯವರಿಗೆ ಜೂ.3 ರಂದು ಮನವಿಯನ್ನು ನೀಡಿದ್ದೆವು. ಈ ಬಗ್ಗೆ ಜಿಲ್ಲಾಧಿಕಾರಿಯವರು ಉಡುಪಿ ಪೊಲೀಸ್ ಅಧೀಕ್ಷಕರಿಗೆ ಪತ್ರವೊಂದನ್ನು ಕೂಡಾ ಬರೆದಿದ್ದರು.

ಮನವಿಗಳ ಹೊರತಾಗಿಯೂ ಸಮಸ್ಯೆ ಬಗೆಹರಿಯದೇ ಇದ್ದಾಗ ಮಣಿಪಾಲ ಪ್ರದೇಶದ ಅಸೋಸಿಯೇಶನ್ ಸದಸ್ಯರಾದ ಕೆಲವು ಸನ್ನದುದಾರರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟೀಶನ್ ಹಾಕಿದ್ದರು.ಈ ವಿಚಾರಕ್ಕೆ ಸಂಬಂಧಿಸಿ ಉಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾಧಿ ಎಸ್. ಮಹೇಶ್ ಕಿರಣ್ ಶೆಟ್ಟಿ ಯವರು ಅರ್ಜಿದಾರರ ಪರವಾಗಿ ವಾದಿಸಿದ್ದರು. ಆ ಮೂಲಕ ಪೊಲೀಸ್ ನಿರೀಕ್ಷಕರು ನೀಡಿರುವ ನೋಟೀಸಿನ ಅಂಶಕ್ಕೆ ತಡೆಯಾಜ್ಞೆ ನೀಡಿದ್ದು, ಸನ್ನದು ಶರ್ತದಲ್ಲಿ ನಮೂದಿಸಿರುವ ಅವಧಿ ಪ್ರಕಾರ ಸನ್ನದು ನಡೆಸಲು ಅವಕಾಶವನ್ನು ನೀಡಿರುತ್ತಾರೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!