ಉಡುಪಿ: 31 ವಷ೯ ಹಳೇಯ ದನಕಳವು ಪ್ರಕರಣ-ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌

ಉಡುಪಿ ಆ.25 (ಉಡುಪಿ ಟೈಮ್ಸ್‌ ವರದಿ): 31 ವಷ೯ ಹಳೇಯ ದನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕಂಡಿದ್ದ ಓವ೯ ಆರೋಪಿಯನ್ನು ಮಣಿಪಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಟಪಾಡಿ ನಿವಾಸಿ ಸೈಯದ್‌ ಮುಸ್ತಾಕ್‌ (45) ಬಂಧಿತ ಆರೋಪಿ.

1993ರ ಜು,21 ರಂದು ಶಿವಳ್ಳಿ ಗ್ರಾಮದ ಇಂದ್ರಾಳಿ ದೇವಸ್ಥಾನದ ಹತ್ತಿರ ದೇವೇಂದ್ರ ನಾಯ್ಕ ಇವರ ಗದ್ದೆಯ ಬಳಿ ಮೇಯಲು ಬಿಟ್ಟಿದ್ದ ಎರಡು ದನಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ದೇವೇಂದ್ರ ನಾಯ್ಕ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆಗಿನ ತನಿಖಾಧಿಕಾರಿಯವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿತನ ವಿರುದ್ದ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಆ ಬಳಿಕ ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಇದೀಗ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕರಾದ ದೇವರಾಜ ಟಿ.ವಿ ರವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣಾ ಹೆಚ್‌ ಸಿ ಪ್ರಸನ್ನ ರವರು ಆರೋಫಿ ಸೈಯದ್‌ ಮುಸ್ತಾಕ್‌ನನ್ನು ಆ.24 ರಂದು ಕಟಪಾಡಿ ಮಣಿಪುರ ಗುಜ್ಜಿ ಹೌಸ್‌ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!