ಮಂಗಳೂರು: ಹಾಂಗ್ಯೂ ಐಸ್ ಕ್ರೀಮ್ ನೊಂದಿಗೆ ಫೇರಿಂಗ್ ಕ್ಯಾಪಿಟಲ್ 25 ಮಿ. ಡಾಲರ್ ಹೂಡಿಕೆ
ಮಂಗಳೂರು, ಆ. 23 : ಮಂಗಳೂರಿನ ಹಾಂಗ್ಯೂ ‘ಐಸ್‌ಕ್ರೀಮ್ಸ್ ಕಂಪೆನಿಯಲ್ಲಿ ಖಾಸಗಿ ಈಕ್ವಿಟಿ ಸಂಸ್ಥೆ ಫೇರಿಂಗ್ ಕ್ಯಾಪಿಟಲ್ 25 ಮಿಲಿಯನ್ ಡಾಲರ್ (ಸುಮಾರು 210 ಕೋ. ರೂ.) ಹೂಡಿಕೆ ಮಾಡಿದ್ದು, ಇದರಿಂದ ಹಾಂಗ್ಯೂ ಸಂಸ್ಥೆಯ ಮಾರುಕಟ್ಟೆಯನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಲು ಸಹಕಾರಿಯಾಗಲಿದೆ.
2003ರಲ್ಲಿ ಪೈ ಕುಟುಂಬ ಆರಂಭಿಸಿದ ಹಾಂಗ್ಯೂ ದಕ್ಷಿಣ ಭಾರತದ ಅತಿದೊಡ್ಡ ಐಸ್ ಕ್ರೀಮ್ಸ್ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಹಾಗೂ ಅತ್ಯುತ್ತಮ ಗುಣಮಟ್ಟ ಮತ್ತು ರುಚಿಕರವಾದ, ಸ್ವಾದಭರಿತ ಐಸ್‌ಕ್ರೀಂಗಳಿಂದ ಗುರುತಿಸಲ್ಪಟ್ಟಿದೆ.
ಈ ವಿಚಾರವಾಗಿ ಹಾಂಗ್ಯೂ ಸ್ಥಾಪಕ ಹಾಗೂ ಎಕ್ಸಿಕ್ಯೂಟಿವ್ ಚೇರ್ಮನ್ ದಿನೇಶ್ ಪೈ ಮಾತನಾಡಿ, ಫೇರಿಂಗ್ ಕ್ಯಾಪಿಟಲ್ ನಿಂದಾಗಿ ಹಾಂಗ್ಯೂ ಐಸ್‌ಕ್ರೀಮ್ಸ್ ಉದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಈ ಮೂಲಕ ಸಂಸ್ಥೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಗ್ರಾಹಕರಿಗೆ ಹೆಚ್ಚು ಉತ್ತೇಜಕ ಉತ್ಪನ್ನಗಳನ್ನು ನೀಡಲು ನೆರವಾಗಲಿದೆ ಎಂದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಅವರು ಮಾತನಾಡಿ, ಫೇರಿಂಗ್ ಕ್ಯಾಪಿಟಲ್‌ನ ಹೂಡಿಕೆಯಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದೇವೆ. ದೇಶದಲ್ಲಿ ಜನ ಮೆಚ್ಚಿದ ಐಸ್‌ಕ್ರೀಂ ಆಗಿಪರಿವರ್ತಿಸಲು ಇದು ಸಹಕಾರಿಯಾಗಲಿದೆ ಎಂದರು.
ಹಾಂಗ್ಯೂ ಕಾರ್ಯತಂತ್ರ ಸಲಹೆಗಾರ ಉಲ್ಲಾಸ್ ಕಾಮತ್ ಮಾತನಾಡಿ, ನಾವು ಐಸ್‌ಕ್ರೀಮ್ ಉದ್ಯಮದಲ್ಲಿ ಅಗಾಧವಾದ ಮಾರುಕಟ್ಟೆ ಹಿಡಿತ ಹೊಂದಿದ್ದೇವೆ. ಫೇರಿಂಗ್ ಪಾಲುದಾರಿಕೆಯು ಕ್ಯಾಪಿಟಲ್ ದೇಶಾದ್ಯಂತ ಬಲವಾದ ಬ್ಯಾಂಡ್ ರೂಪಿಸಲು ಸಾಧ್ಯವಾಗಲಿದೆ ಎಂದರು.
ಹಾಂಗ್ಯೂ ಐಸ್‌ಕ್ರೀಮ್ಸ್‌ನ ಎಂಡಿ ಪ್ರದೀಪ್ ಪೈ ಹಾಗೂ ಫೇರಿಂಗ್ ಕ್ಯಾಪಿಟಲ್‌ನ ಸಹ ಸಂಸ್ಥಾಪಕ ಮತ್ತು ಎಂ.ಡಿ. ಸಮೀರ್ ಶ್ರಾಫ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಹ್ಯಾಂಗೋ ಐಸ್‌ಕ್ರೀಂ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳ ಸುಮಾರು 350 ಜಿಲ್ಲೆಗಳಲ್ಲಿ 30 ಸಾವಿರಕ್ಕೂ ಅಧಿಕ ವಿತರಕರನ್ನು ಹೊಂದಿದೆ. ಆಧುನಿಕ ಹಾಗೂ ಆನ್ ಲೈನ್ ವ್ಯವಹಾರದ ಮೂಲಕ ಕಪ್, ಕೋನ್ ಗಳು, ಟ್ಯೂಬ್ ಗಳು, ಕುಲ್ಫಿ ಸಹಿತ ವಿವಿಧ ಬಗೆಯ ಸುಮಾರು 1.2 ಲಕ್ಷ ಲೀಟರ್ ಐಸ್ ಕ್ರೀಂಗಳನ್ನು ನಿತ್ಯ ಗ್ರಾಹಕರಿಗೆ ವಿತರಿಸುತ್ತಿದೆ.