ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌ.ಕೋ.ಆ ಸಂಸ್ಥೆ ಸಮಾಜಕ್ಕೆ ಮಾದರಿ- ಫಾದರ್ ಚಾರ್ಲ್ಸ್ ಮೆನೆಜೆಸ್
ಉಡುಪಿ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ ಶಾಖೆ ವತಿಯಿಂದ 78ನೇ ಸ್ವಾತಂತ್ರೋತ್ಸವದ ಪ್ರಯುಕ್ತ ನಗರದ ಮಾನಸಿಕ ವಿಕಲಚೇತನರ ವೃತ್ತಿಪರ ಪುನರ್ವಸತಿ ಕೇಂದ್ರವಾದ ಆಶಾ ನಿಲಯ ಶಾಲಾ ಮಕ್ಕಳಿಗೆ ಚಾದರ್ & ತಿಂಡಿ ತಿನಸು ವಸ್ತುಗಳನ್ನು ಮದರ್ ಆಫ್ ಸಾರೋಸ್ ಚರ್ಚ್ ಉಡುಪಿ ಇಲ್ಲಿಯ ವಂದನೀಯ ಧರ್ಮಗುರುಗಳಾದ ಚಾರ್ಲ್ಸ್ ಮೆನೆಜೆಸ್ ಹಸ್ತಾಂತರಿಸಿದರು.
ವಂ.ಧರ್ಮಗುರುಗಳಾದ ಚಾರ್ಲ್ಸ್ ಮೆನೆಜೆಸ್ ಮಾತನಾಡಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸಂಸ್ಥೆಯು ಸುಮಾರು7 ವರ್ಷಗಳಿಂದ ಸ್ವಾತಂತ್ರೋತ್ಸವದ ಸಮಯದಲ್ಲಿ ವಿಶೇಷ ಮಕ್ಕಳ ಶಾಲೆಗೆ ಅಗತ್ಯ ವಸ್ತುಗಳನ್ನು ನೀಡುತ್ತಾ ಬಂದಿದ್ದು, ಈ ಸಮಾಜಮುಖಿ ಕಾರ್ಯವು ಅವರಿಗೆ ಉತ್ತರೋತ್ತರ ಅಭಿವೃದ್ಧಿಯನ್ನು ತರಲಿ ಹಾಗೆಯೇ ಈ ಒಳ್ಳೆಯ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಧರ್ಮಗುರುಗಳಾದ ಚಾರ್ಲ್ಸ್ ಮೆನೆಜೆಸ್, ಮಕ್ಕಳ ಜೊತೆ ಬೆರೆತು ಕೆಲಕಾಲ ಕಳೆದರು. ಆ ಸಮಯದಲ್ಲಿ ವಿಶೇಷ ಮಕ್ಕಳು ಪ್ರದರ್ಶಿಸಲ್ಪಟ್ಟ ನೃತ್ಯದ ಬಗೆಗೆ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳ ಶಾಲೆಯ ಪ್ರಾಂಶುಪಾಲರಾದ ಶೈಲಾ ಅಮ್ಮನ್ನ ಹಾಗೂ ವಾರ್ಡನ್ ಅದ ದಿವ್ಯಜ್ಯೋತಿ. ಸೈಂಟ್ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಉಡುಪಿ-ಮಂಗಳೂರು ವಿಭಾಗದ ಆಡಳಿತ ವ್ಯವಸ್ಥಾಪಕರಾದ ನಾಗರಾಜ್ ಮಡಿವಾಳ್ , ಉಡುಪಿ ಶಾಖೆಯ ಸಹಾಯಕ ಪ್ರಬಂಧಕರಾದ ಸಂದೇಶ್ ಹಾಗು ಕಾವ್ಯ, ಹಾಗೂ ಸಿಬ್ಬಂದಿಗಳಾದ ನಿಶಿತ್ ಕುಲಾಲ್ ,ಶಶಾಂಕ್ , ಅಜಯ ಶೆಟ್ಟಿ ಧನುಷ್ ಯು ಪೂಜಾರಿ ,ದೀಕ್ಷಿತಾ,ಕಾಶೀನಾಥ್ ಶೆಟ್ಟಿ ಉಪಸ್ಥಿತರಿದ್ದರು. ಶೈಲಾ ಅಮ್ಮನ್ನ ಕಾರ್ಯಕ್ರಮವನ್ನು ನಿರೂಪಿಸಿ ನಿಶಿತ್ ಕುಲಾಲ್ ವಂದಿಸಿದರು.