ಹೆಬ್ರಿ ಗ್ರಾಮಕ್ಕೆ ಬೇಕಾಗಿದೆ ಸ್ಕ್ಯಾನಿಂಗ್ ಸೆಂಟರ್
ಹೆಬ್ರಿ ಆ.16(ಉಡುಪಿ ಟೈಮ್ಸ್ ವರದಿ): ಹೆಬ್ರಿ ಗ್ರಾಮಕ್ಕೆ ಒಂದು ಸ್ಕ್ಯಾನಿಂಗ್ ಸೆಂಟರ್ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ಇಲ್ಲಿ ಬೇರೆ ಬೇರೆ ಗ್ರಾಮಗಳಿಂದ ರೋಗಿಗಳು ಚಿಕಿತ್ಸೆಗಳಿಗಾಗಿ ಬಂದರೆ ಅವರಿಗೆ ಬೇರೆ ಊರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹೆಬ್ರಿ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿರುತ್ತಾರೆ. ಹೆಬ್ರಿ ಗ್ರಾಮವು ಬೇರೆ ಎಲ್ಲಾ ಅಗತ್ಯ ಜನರಿಗೆ ಸಿಕ್ಕಿದರೂ ಸಹ ಆರೋಗ್ಯ ವಿಚಾರಕ್ಕೆ ನೋಡಿದಾಗ ಇಲ್ಲಿ ಸ್ಕ್ಯಾನಿಂಗ್ ಮೇಷಿನ್ ಮಾತ್ರ ಜನರಿಗೆ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಗ್ರಾಮದಲ್ಲಿ 10 ಕ್ಕೂ ಅಧಿಕ ಖಾಸಗಿ ಕ್ಲಿನಿಕ್‌ಗಳು, ಲ್ಯಾಬ್‌ಗಳು, ಸಮುದಾಯ ಆರೋಗ್ಯ ಕೇಂದ್ರ, 1 ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತದೆ. ಇಷ್ಟು ವ್ಯವಸ್ಥೆ ಇದ್ದರೂ ಸಹ ರೋಗಿಗಳು ಸ್ಕ್ಯಾನಿಂಗ್‌ಗಾಗಿ ಹೆಬ್ರಿಯಿಂದ ಕಾರ್ಕಳಕ್ಕೆ ಅಥವಾ ಬ್ರಹ್ಮಾವರ, ಉಡುಪಿ, ಮಣಿಪಾಲ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಬೇರೆ ಊರಿಗೆ ಹೋಗುವಾಗ ಸಮಯ ಮತ್ತು ಹಣ ಎಲ್ಲಾ ವ್ಯರ್ಥ ಆಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಅಲ್ಲದೆ ಆಸುಪಾಸಿನ ಗ್ರಾಮದ ಬಾಣಂತಿಯರಿಗೆ ಪರೀಕ್ಷೆಗಳಿಗೆ ಹೋದಾಗ ವೈಧ್ಯರು ಸ್ಕ್ಯಾನಿಂಗ್ ಪರೀಕ್ಷೆ ಹೇಳಿದರೆ ಗರ್ಬೀಣಿ ಮಹಿಳೆಯರಿಗೆ ಬೇರೆ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಕೆಲವು ಊರುಗಳಲ್ಲಿ ರಸ್ತೆಗಳ ಹೊಂಡ ಗುಂಡಿಯಲ್ಲಿ ಪ್ರಯಾಣಿಸುವಾಗ ರೋಗಿಗಳಿಗೆ ಒಂದು ಖಾಯಿಲೆಯ ಜೊತೆಗೆ ಇನ್ನೊಂದು ರೋಗ (ಬೆನ್ನು ಮತ್ತು ಕೈಕಾಲು ನೋವು) ಉಂಟಾಗುತ್ತದೆ. ಆದ್ದರಿಂದ ಜನಪ್ರತಿನಿಧಿಗಳು ಹೆಬ್ರಿ ಗ್ರಾಮಕ್ಕೆ ಅತಿ ಅಗತ್ಯವಾದ ಸ್ಕ್ಯಾನಿಂಗ್ ಸೆಂಟರ್, ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಿ ಸುಸಜ್ಜಿತ ಆಸ್ಪತ್ರೆಯನ್ನು ಗ್ರಾಮದ ಜನರಿಗೆ ಮಾಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.