ಉಡುಪಿ ಜಿಲ್ಲೆಯ ವಿವಿಧೆಡೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ…
ಉಡುಪಿ ಆ.15(ಉಡುಪಿ ಟೈಮ್ಸ್ ವರದಿ): ಇಂದು ಉಡುಪಿಯಾದ್ಯಂತ ವಿವಿಧ ಕಡೆಗಳಲ್ಲಿ ವಿಜೃಂಭಣೆಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನವನ್ನು ಉಡುಪಿ ಪತ್ರಿಕಾ ಭವನದಲ್ಲಿ ಆಚರಿಸಲಾಯಿತು.
ಹಿರಿಯ ಪತ್ರಕರ್ತ ಸಂಜೀವ ಕುಂದರ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವದ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಉಡುಪಿ ವಾರ್ತಾಧಿಕಾರಿ ಮಂಜುನಾಥ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲ್, ಉಡುಪಿ ಪತ್ರಿಕಾ ಭವನ ಸಮಿತಿಯ ಸಹ ಸಂಚಾಲಕ ಅಂಕಿತ್ ಶೆಟ್ಟಿ, ಪತ್ರಕರ್ತರಾದ ಮೈಕಲ್ ರೋಡ್ರಿಗಸ್, ನಿತೀಶ್ ಮಂಚಿ, ರಿಚರ್ಡ್ ಡಿಸೋಜ, ಹರೀಶ್ ಕುಂದರ್, ಆದಿತ್ಯ ಐತಾಳ್, ಹಿರಿಯರಾದ ಎಂ.ಆರ್.ಪೈ, ಶಶಿಧರ್ ಮಾಸ್ತಿಬೈಲ್ ಮೊದಲಾದವರು ಉಪಸ್ಥಿತರಿದ್ದರು.
78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರಂಬಳ್ಳಿ ಫ್ರೆಂಡ್ಸ್ ಇದರ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಡುಪಿಯ ಮಾಜಿ ಶಾಸಕರಾದ ಕೆ ರಘುಪತಿ ಭಟ್ ಭಾಗವಹಿಸಿದರು.
ಅಂಬೇಡ್ಕರ್ ಯುವಕ ಮಂಡಳ ತೆಂಕು ಬಿರ್ತಿ ಬ್ರಹ್ಮಾವರ, ಆದಿದ್ರಾವಿಡ ಸಹಕಾರಿ ಸಂಘ , ಅಂಬೇಡ್ಕರ್ ವೆಲ್ಫೇರ್ ಟ್ರಸ್ಟ್, ತೆಂಕು ಬಿರ್ತಿ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಅಂಬೇಡ್ಕರ್ ಯುವಕ ಮಂಡಳದ ಮಾಜಿ ಅಧ್ಯಕ್ಷರಾದ ಹರೀಶ್ಚಂದ್ರ ಬಿರ್ತಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಅವರು ಮಾತನಾಡಿ, ಈ ದೇಶದ ಮೂಲನಿವಾಸಿಗಳಾದ ಆದಿದ್ರಾವಿಡರಿಗೆ ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲಾ , ಪಾಶ್ಚಿಮಾತ್ಯ ಏಷ್ಯಾದಿಂದ ಬಂದಂತಹ ಆರ್ಯರು ನಮ್ಮನ್ನು ಆಳುತ್ತಿದ್ದಾರೆ , ನಾವು ಹಿಂದೂ ಧರ್ಮದ ಜಾತಿ ಎಂಬ ವಿಷವರ್ತುಲದಲ್ಲಿ ಸಿಕ್ಕಿ ನೆಲಕಚ್ಚಿ ಹೋಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವ್ರತ್ತ ಕರ್ನಾಟಕ ಬ್ಯಾಂಕ್ ಉಧ್ಯೋಗಿ ಬಿರ್ತಿ ಸುರೇಶ, ಯುವಕ ಮಂಡಳದ ಸಧಸ್ಯರಾದ ಸಂತೋಷ ಬಿರ್ತಿ , ಶಿವಾನಂದ ಬಿರ್ತಿ , ಅನಿಲ ಬಿರ್ತಿ , ಚೈತನ್ಯ ಬಿರ್ತಿ, ಅರುಣ ಪಾಡಿಗಾರ , ಕಿಶನ್ ಕುಮಾರ್ ಬಿರ್ತಿ , ಸ್ವರಾಜ್ ಬಿರ್ತಿ , ಪ್ರಸನ್ನ ಚಾಂತಾರು , ಗೀತಾ ಬಿರ್ತಿ , ಮಮತಾ , ಶ್ವೇತಾ ಬಿರ್ತಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿ,”ಕುಮಾರ ಕೃಪ” ದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷರಾದ ವಾಸುದೇವ ರಾವ್, ನಾಯಕರುಗಳಾದ ಜಯಕುಮಾರ್ ಪರ್ಕಳ, ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಗಂಗಾಧರ್ ಬಿರ್ತಿ, ರಾಮರಾವ್, ದೇವರಾಜ್, ಪದ್ಮನಾಭ ಕೋಟ್ಯಾನ್, ರವಿಚಂದ್ರ, ರಶೀದ್,ಪ್ರಶಾಂತ್ .ಕೆ ,ಪ್ರಶಾಂತ್ ಮಡಿವಾಳ್ ,ರಂಗನಾಥ್ ಕೋಟ್ಯಾನ್ ಹಾಗೂ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆ ವತಿಯಿಂದ ಇಂದು ನಡೆದ “ಕಾಪು ತಾಲ್ಲೂಕು ಮಟ್ಟದ 78 ನೇ ಸ್ವಾತಂತ್ರೋತ್ಸವ” ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.
ಕಾಪು ತಹಶೀಲ್ದಾರರಾದ ಪ್ರತೀಭಾ ಆರ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ, ಕಾಪು ಪುರಸಭೆಯ ಮುಖ್ಯಾಧಿಕಾರಿ ನಾಗರಾಜ್, ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಮಾನೆ, ಕಾಪು ಪೋಲಿಸ್ ಉಪ ನಿರೀಕ್ಷಕರಾದ ಖಾದರ್, ಕಾಪು ತಾಲೂಕು ಯುವಜನ ಸಬಲೀಕರಣ ಅಧಿಕಾರಿಗಳಾದ ರಿತೇಶ್, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಗೋಪಾಲಕೃಷ್ಣ ಗಾವಂಸ್ಕರ್, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ ಹಾಗೂ ಕಾಪು ಪುರಸಭೆಯ ಸದಸ್ಯರು ಮತ್ತು ಕಾಪು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಘಟಕವಾಗಿರುವ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ [ಎಂಐಟಿ]ಯ ವತಿಯಿಂದ ರಾಷ್ಟ್ರದ 78ನೆಯ ಸ್ವಾತಂತ್ರ್ಯೋತ್ಸವವನ್ನು ಬೇಸಿಕ್ ಸಾಯನ್ಸ್ ಕಟ್ಟಡದ ಹಿಂದಿನ ಎಂಎಂಎಂಸಿ, ಮಣಿಪಾಲದ ಮುಂಭಾಗದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಉಪ ಕುಲಪತಿ ಲೆ. ಜ. ಡಾ. ಎಂ. ಡಿ. ವೆಂಕಟೇಶ್, ಕುಲ ಸಚಿವ ಡಾ. ಪಿ. ಗಿರಿಧರ ಕಿಣಿ, ಎಂಐಜಿ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್ ಅವರು ಉಪಸ್ಥಿತರಿದ್ದು.
ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವತಿಯಿಂದ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಐಸಿವೈಎಂ ಉದ್ಯಾವರ ಘಟಕದ ನೇತೃತ್ವದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲಾ ವಟಾರದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವಂ. ಫಾ. ಅನಿಲ್ ಡಿಸೋಜಾ ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರು ವo. ಸ್ಟೇಫನ್ ರೊಡ್ರಿಗಸ್, ಪಾಲನ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಡೇಸ, ಕಾರ್ಯದರ್ಶಿ ಜಾನ್ ಡಿಸೋಜಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ರೋನಲ್ಡ್ ರೆಬೆಲ್ಲೊ, ಐಸಿವೈಎಂ ಅಧ್ಯಕ್ಷ ಗ್ಲ್ಯಾನಿಶ್ ಪಿಂಟೋ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಕಾರ್ಯದರ್ಶಿ ಲ. ಜೆರಾಲ್ಡ್ ಪಿರೇರ , ಐಸಿವೈಎಂ ಸದಸ್ಯರು ಉಪಸ್ಥಿತರಿದ್ದರು.
ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಜಸ್ಪ್ರೀತ್ ಸಿಂಗ್ ದಿಲ್ ಅವರು ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು ಭಾರತ ದೇಶದ ಏಕತೆ ಹಾಗೂ ಸಮಗ್ರತೆಯೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ . ಭಾರತ ದೇಶವು 4 ಕಡೆಗಳಿಂದಲೂ ವಿವಿಧ ಸಂಸ್ಕೃತಿಯ ಆಗರವಾದರೂ ನಾವೆಲ್ಲರೂ ಒಗ್ಗಟ್ಟಿನಿಂದ ಬಾಳಿ ಭಾರತವನ್ನು ಸಧ್ರಡ ಗೊಳಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ. ಎಸ್ ಚಂದ್ರಶೇಖರ್, ಆಸ್ಪತ್ರೆಯ ಹಿರಿಯ ಪ್ರಬಂಧಕರಾದ ಡಿಯಾಗೋ ಕ್ವಾಡ್ರಾಸ್ ಹಾಗೂ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು, ವೈದ್ಯಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಕಳದ ಬಂಗ್ಲೆಗುಡ್ಡೆ ಹಾಯಾತುಲ್ ಇಸ್ಲಾಂ ಅಸೋಸಿಯೇಷನ್ ಹಾಗೂ ತ್ವೈಭಾ ಗಾರ್ಡನ್ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿಯ ಆವರಣದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ತ್ವೈಭಾ ಗಾರ್ಡನ್ ಶಿಕ್ಷಣ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ತ್ವೈಭಾ ಗಾರ್ಡನ್ ಪ್ರಾಂಶುಪಾಲ ಅಹಮದ್ ಶರೀಫ್ ಸ ಅದಿ ಕಿಲ್ಲೂರ್, ಹಯಾತುಲ್ ಇಸ್ಲಾಂ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬಷೀರ್, ಉಪಾಧ್ಯಕ್ಷ ಕೆ ನೂರುದ್ದೀನ್, ಮಯ್ಯದ್ಧಿ ಪರನಿರು, ಎಸ್ ಎಸ್ ಎಫ್ ಮುಖ್ಯಸ್ಥರಾದ ಮುನೀರ್, ದಾವೂದ್, ಫಾಯಾಝ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷ, ಮೀಯ್ಯರು ಜಾಮಿಯಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಗೌಸ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ಅಧ್ಯಕ್ಷ ನಾಸಿರ್ ಶೇಖ್ ಬೈಲೂರು , ತ್ವೈಭಾ ಗಾರ್ಡನ್ ವ್ಯವಸ್ಥಾಪಕ ಇಸ್ಮಾಯಿಲ್ ಮಾಸ್ಟರ್, ಅಲ್ ಅಯ್ಯೂಬ್ ಮದ್ರಸದ ಧರ್ಮ ಗುರುಗಳು ಉಪಸ್ಥಿತರಿದ್ದರು.
ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆಯ ನೇತತ್ವದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘಟನೆಯ ಸ್ಥಾಪಕ ಅಧ್ಯಕ್ಷ ಕೆ ಉದಯಕುಮಾರ್ ಶೆಟ್ಟಿಯವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಪಿಟ್ ಕಂಪನಿಯ ರೀಜನಲ್ ಹೆಡ್ ಸೇಲ್ಸ್ ಮ್ಯಾನೇಜರ್ ಅಲ್ವೇನ್, ಸಂಘಟನೆಯ ಗೌರವಾಧ್ಯಕ್ಷ ರಾಜೇಶ್ ಬಿ ಶೆಟ್ಟಿ, ಗೌರವ ಅಧ್ಯಕ್ಷ ವಿಟ್ಟಲ ಜತ್ತನ್, ಅಧ್ಯಕ್ಷ ಚನ್ನಕೇಶವ ಭಟ್, ಮತ್ತು ಕೋಶಾಧಿಕಾರಿ ಸ್ಟ್ಯಾಂಲಿ ಬಂಗೇರ, ಉಪ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ಅಶ್ವಿನ್, ಉಪಾಧ್ಯಕ್ಷ ಜಯಶೀಲ , ಸಂಘಟನಾ ಕಾರ್ಯದರ್ಶಿ ಸಂದೀಪ್ ಪೂಜಾರಿ, ಪ್ರತಾಪ್ ಚಂದ್ರ , ಶರತ್ ಕುಮಾರ್, ಜಗದೀಶ್ , ಸದಾನಂದ ಸುವರ್ಣ , ಮಂಜು, ರವಿ ಪೂಜಾರಿ, ವನರಾಜ ಆಚಾರ್ಯ, ಹಾಗೂ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.
ಆದಿ ಉಡುಪಿಯ ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಧ್ವಜಾರೋಹಣ ಆಚರಿಸಲಾಗಿದ್ದು ಅಧ್ಯಕ್ಷರಾದ ಸುಭಾಷಿತ್ ಕುಮಾರ್ ಮತ್ತು ವ್ಯಾಪಾರಸ್ತರಾದ ಸಮಿಊಲ್ಲ ಸಾಹೇಬ್ ,ಸುಶಾಂತ್ ಬ್ರಹ್ಮ ವಾರ್,ವಿಶ್ವನಾಥ್ ರೆಡ್ಡಿ,ಫಯಾಜ್ ,ದೊಡ್ಡ ರೆಡ್ಡಿ, ಸಜ್ಜನ್, ಪ್ರಭುಗೌಡ ಮತ್ತು ಎ.ಪಿ.ಎಮ್.ಸಿ. ಯ ಮಹೇಶ್ ಹಿರಿಯಡ್ಕ ,ಸಿಭಂಧಿ ವರ್ಗ ಉಪಸ್ಥಿತರಿದ್ಧರು.
ನೆಹರೂ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ಅಲೆವೂರು ಇವರ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಒರಿಯಂಟಲ್ ಇನ್ಸುರೇನ್ಸ್ ಕಂಪನಿ ಇದರ ನಿವೃತ್ತ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಶರತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರಾದ ಹರೀಶ್ ಕಿಣಿ, ಅಧ್ಯಕ್ಷರಾದ ದಯಾನಂದ ಅಂಚನ್, ಕಾರ್ಯದರ್ಶಿ ಗುರುರಾಜ್ ಸಾಮಗ, ಗೌರವ ಸಲಹೆಗರರಾದ ಸತೀಶ್ ಪೂಜಾರಿ,ಮುರಳೀಧರ ಭಟ್ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಇಂದು ಉಡುಪಿ ಜಾಮಿಯಾ ಮಸೀದಿಯ ವತಾರದಲ್ಲಿ ಸ್ವತಂತ್ರ ದಿನಾಚರಣೆ ಯನ್ನು ವಿಜ್ಜಮ್ ಭನೆ ಇಂದ ಆಚರಿಸಲಾಯಿತು.ಮಸೀದಿ ಉಪಾಧ್ಯಕ್ಷರಾದ ವಿ. ಎಸ್.ಉಮರ್ ಧ್ವಜಾಹರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ರಾದ ಮೌಲಾನ ರಶೀದ್ ಅಹಮದ್ ನ ದ್ವಿ ಯವರು ದೇಶದ ಸ್ವಾತತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ವರನ್ನುನೆನಪಿಸಿದರು. ಈ ಮಹ ನೀಯರ ತ್ಯಾಗ ದಿಂದ ನಮಗೆ ದೊರೆತ ಸ್ವಾತಂತ್ರ್ಯ ವ ನ್ನು ಉಳಿಸಿ ಎಲ್ಲರೂ ಸಾಮರಸ್ಯ ಡಿಂದ ಬಳಬೇಕಾ ಗಿದೆ ಎಂದು ಕಿ ವಿ ಮಾತು ಹೇಳಿದರು.ಮಸೀದಿಯ ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್, ಖಜಾಂಜಿ ಶಾಹಿದ್ ಆಲಿ ಸಮಿತಿ ಸದಸ್ಯರಾದ ಇಫ್ತಿಕರ್ , ಜಮಾತ್ ಸದಸ್ಯರು ,ಮುಸಲ್ಲಿ ಬಾಂಧವರು ಮದ್ರಸದ ವಿಧ್ಯಾರ್ಥಿ ,ವಿಧ್ಯಾರ್ಥಿನಿ ಯರು .ಉಪಸ್ಥಿತರಿದ್ದರು.
ಪರ್ಕಳದ ಸ್ವಾಗತ್ ಫ್ರೆಂಡ್ಸ್ ವತಿಯಿಂದ 78ನೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಈ ವೇಳೆ ಸಮಾಜ ಸೇವಕಿ, ಶೆಟ್ಟಿ ಬೆಟ್ಟು ಅಮಿತಾ ಆರ್ ಹೆಗ್ಡೆ ಅವರು ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸ್ವಾಗತ ಫ್ರೆಂಡ್ಸ್ ಅಧ್ಯಕ್ಷ ಪರ್ಕಳ ಮೋಹನ್ ದಾಸ್ ನಾಯಕ್, ಡಾ| ಸತೀಶ್ ಮಲ್ಯ, ಹಿರಿಯರಾದ ವಾಸು ಆಚಾರ್, ಶಂಕರ್ ನಾಯ್ಕ್, ಪ್ರಕಾಶ್ ನಾಯ್ಕ್, ನಾಗರಾಜ್ ನಾಯಕ, ಬೈರಂಜೆ ಸುಧೀರ್ ಶೆಟ್ಟಿ ಹಿರಿಯಡ್ಕ, ಸದಾ ಪೂಜಾರಿ, ಬಾಲಕೃಷ್ಣ ಶೆಟ್ಟಿ ಬನ್ನಂಜೆ, ಖ್ಯಾತ ಕ್ರಿಕೆಟ್ ತರಬೇತುದಾರ ರಾಮಚಂದ್ರ ನಂಬಿ ಯಾರ್ ಪರ್ಕಳ, ದೇವೇಂದ್ರ ನಾಯ್ಕ್, ಅಶೋಕ್ ಶೆಟ್ಟಿ ಬಡಗಬೆಟ್ಟುಸಾಮಾಜಿಕ ಕಾರ್ಯಕರ್ತ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಮಾಜಿ ನೌಕಾಧಿಕಾರಿ, ಲೆ.ಕಮಾಂಡರ್ ಭರತ್ ಕುಮಾರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ದೇಶ ಭಕ್ತಿಯು ನಮ್ಮ ಪ್ರತಿ ಕೆಲಸಕಾರ್ಯದಲ್ಲೂ ಇರಬೇಕು. ನಮ್ಮ ಪ್ರಧಾನಿಯವರ ಕನಸಾದ ಸದೃಢ ಭಾರತದ ನಿರ್ಮಾಣದಲ್ಲಿ ನಾವೆಲ್ಲರೂ ನಮ್ಮ ಪಾತ್ರವನ್ನು ಧನಾತ್ಮಕ ಚಿಂತನೆಗಳ ಮೂಲಕ ಸಾಕಾರಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಸಿ.ಎ. ನಿತ್ಯಾನಂದ ಪ್ರಭು, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ ಹಾಗೂ ಉಷಾ ರಾವ್ ಯು ಮತ್ತು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಣಿ ಕೆ., ಸಂಸ್ಥೆಯ ಸಾರ್ವಜನಿಕ ಸಂಪರ್ಕಾದಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಉಪಸ್ಥಿತರಿದ್ದರು.
ಮಣಿಪಾಲದ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಮಣಿಪಾಲ್ ಗ್ರೂಪ್‌ನ ಅಧ್ಯಕ್ಷರಾದ ಟಿ ಸುಧಾಕರ ಪೈ ಧ್ವಜಾರೋಹಣ ಗೈದು ಮಾತನಾಡಿ ಪ್ರಾಮಾಣ ಕ ಕರ್ತವ್ಯನಿಷ್ಠೆಯಿಂದ ಕಾರ್ಯಪ್ರವೃತ್ತರಾದರೆ ಭವ್ಯ ಭಾರತದ ವಿಕಾಸ ಸುಲಭಸಾಧ್ಯ. ಈ ನಿಟ್ಟಿನಲ್ಲಿ ದೇಶಸೇವೆಗೈಯುವ ಮನೋಭಾವನೆಯನ್ನು ಮೂಡಿಸಿಕೊಳ್ಳಬೇಕೆಂದು ಎಂದರು.
ಮಣಿಪಾಲ್ ಹೈ ಸ್ಕೂಲ್ ಟ್ರಸ್ಟ್‌ನ ಕರೆಸ್ಪೊಂಡೆಂಟ್ ಪ್ರಕಾಶ್ ಶೆಟ್ಟಿ, ಎಚ್.ಪಿ.ಆರ್. ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಶ್ರೀ ಹರಿಪ್ರಸಾದ್ ರೈ, ಸಂಸ್ಥೆಯ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಪನ್ಯಾಸಕಿ ಶಮಿತಾ ಉಪಸ್ಥಿತರಿದ್ದರು.
ಮಲ್ಪೆ ಸಿಟಿಝನ್ ಸರ್ಕಲ್ ಅಟೋ ಚಾಲಕ ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರು, ನಮ್ಮ ದೇಶದಲ್ಲಿ ವೈಚಾರಿಕತೆ,ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಅಧಿಕಾರಶಾಹಿತ್ವ, ಬಂಡವಾಳಶಾಹಿತ್ವ, ವೈದಿಕಶಾಹಿತ್ವ, ಧಾರ್ಮಿಕ ಡಾಂಬಿಕತನ, ಸಾಮಾಜಿಕ ಅಸಹಿಷ್ಣತೆ ಈ ದೇಶದ ಸ್ವಾತಂತ್ರ್ಯ ಕಸಿದು ಅಪಾಯಕ್ಕೆ ಸಿಳುಕಿಸಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉದ್ಯಮಿ, ಸಮಾಜಸೇವಕ ಶೇಖರ್ ತಿಂಗಳಾಯ, ಶಮ್ಮಿ ಕೊಡವೂರು, ಗಣೇಶ್ ನೆರ್ಗಿ, ಶಾರದ ಕಾಂಚನ್, ಅನಂತ ನೆರ್ಗಿ, ಅಶ್ವಿನಿ ಟೀಚರ್, ಬುರಾನ್ ಮಲ್ಪೆ,ರವಿ ನೆರ್ಗಿ ಮುಂತಾದವರು ಉಪಸ್ಥಿತರಿದ್ದರು.
ಕುಕ್ಕಿಕಟ್ಟೆ ಇಂದಿರಾನಗರ ರಿಕ್ಷಾ ನಿಲ್ದಾಣದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾಪುವಿನ ಮಲ್ಲಾರು ಯುವಕ ಮಂಡಲದ ವತಿಯಿಂದ ಇಂದು 78 ನೇ ಸ್ವಾತಂತ್ರತ್ಯೋತ್ಸವವನ್ನು ವಿಜೃಂಭಂಣೆಯಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಯುವಕ ಮಂಡಲದ ಅಧ್ಯಕ್ಷರು ಶ್ರೀ ರಾಜೇಶ್ ಭಂಡಾರಿಯವರು ನೆರವೇರಿಸಿದರು.
ಸಭಾ ಕಾರ್ಯಕ್ರಮದಲ್ಲಿ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರು ನಾಗಭೂಷಣ ರಾವ್, ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು – ಮಲ್ಲಾರ್ ನ ಧರ್ಮಗುರುಗಳಾದ ಮೌಲಾನ ಅಬ್ದುಲ್ ರಶೀದ್ ಸಖಾಫಿ , ಇಮ್ಮ್ಯಾನುವಲ್ ಟ್ರಸ್ಟ್ ನ ಅಧ್ಯಕ್ಷರು ಸುನೀಲ್ ಫಾಸ್ಟರ್, ಯುವಕ ಮಂಡಲದ ಸಲಹೆಗಾರರಾದ ಅನ್ವರ್ ಅಲಿ, ಗೌರವ ಅಧ್ಯಕ್ಷರು ಸುಧಾಕರ ಶೆಟ್ಟಿ, ಪುರಸಭಾ ಸದಸ್ಯರಾದ ಉಮೇಶ್ ಕರ್ಕೇರಾ, ವಿದ್ಯಾಲತಾ , ನಸೀರ್ ಅಹಮದ್, ಅಧ್ಯಕ್ಷರು ರಾಜೇಶ್ ಭಂಡಾರಿ, ರೇಖಾ ಸಂತೋಷ್, ಕಾರ್ಯದರ್ಶಿ ನಾರಾಯಣ, ಅಂಗನವಾಡಿ ಕಾರ್ಯಕರ್ತೆ ವಿಧ್ಯಾ ಪ್ರಶಾಂತ್, ನಿತ್ಯಾನಂದ ಕಾಮತ್, ವೇಲು ಮಲ್ಲಾರ್, ಮುಹಮ್ಮದ್ ಸಾದಿಕ್ ರವರು ಉಪಸ್ಥಿತರಿದ್ದರು.
ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿ ಸಂಘ ಕೆದಿಂಜೆ, ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ, ರಾಜ್ಯ ಅತ್ಯುತ್ತಮ ಯವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕೆದಿಂಜೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕೆದಿಂಜೆ ಶಾಲಾ ಸಂಚಾಲಕ ಯು.ಶೇಷಗಿರಿ ಕಾಮತ್ ದ್ವಜಾರೋಹಣಗೈದರು. ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾದ ಎನ್. ತುಕಾರಾಮ ಶೆಟ್ಟಿ ಹಾಗೂ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕೆದಿಂಜೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಅನಿಲ್ ಕುಮಾರ್, ಎನ್. ಸುಧಾಕರ್ ರಾವ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಬೋಳ ಉದಯ ಅಂಚನ್, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸರಬೈಲು, ಪೂರ್ವಾಧ್ಯಕ್ಷ ಸತೀಶ್ ಪೂಜಾರಿ, ಸುರೇಶ್ ಅಬ್ಬನಡ್ಕ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಲೀಲಾ ಪೂಜಾರಿ, ರಘು ಪೂಜಾರಿ, ಕೆದಿಂಜೆ ಶಾಲಾ ಮುಖ್ಯ ಶಿಕ್ಷಕ ಪ್ರಥ್ವೀರಾಜ್ ಬಲ್ಲಾಳ್ , ಸಹಶಿಕ್ಷಕಿ ರೇಖಾ ಪೈ, ಗೌರವ ಶಿಕ್ಷಕಿಯರಾದ ಮಮತಾ ಜೆ. ಭಾರತಿ ಆಚಾರ್ಯ, ಹರ್ಷಿತಾ, ಆಶಾ ಆಚಾರ್ಯ ಉಪಸ್ಥಿತರಿದ್ದರು.
ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ನಿವೃತ್ತ ಯೋಧ ಮಣೂರು ಪಡುಕರೆಯ ಯೋಗೀಶ್ ಕಾಂಚನ್ ಅವರು ಧ್ವಜಾರೋಹಣ ಗೈದರು. ಬಳಿಕ ಮಾತನಾಡಿದ ಅವರು, ಸೇನೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸುವ ಬಗ್ಗೆ ಕೆಲ ತಾಯಂದಿರರಿಗೆ ಗೊಂದಲ ಮೂಡಿದೆ. ಸೇನೆಗೆ ಸೇರುವವರು ಸಾಯುವುದಕ್ಕೆ ಎಂಬ ತಪ್ಪು ಕಲ್ಪನೆಯನ್ನು ಹೊರದಬ್ಬಿ ದೇಶಾಭಿಮಾನದ ಬೀಜ ಬಿತ್ತಿ ಎಂದರು.
ಇದೇ ವೇಳೆ ಸಂಸ್ಥೆಯ ವತಿಯಿಂದ ನಿವೃತ್ತ ಯೋಧ ಯೋಗೀಶ್ ಕಾಂಚನ್ ಇವರನ್ನು ಸನ್ಮಾನಿಸಿ ಗೌರವ ವಂದನೆ ಸಲ್ಲಿಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಕಾರ್ಯದರ್ಶಿ ಶೇಖರ್ ಮರವಂತೆ, ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸದಸ್ಯರಾದ ದಿನೇಶ್ ಆಚಾರ್, ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ, ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಹಂದಟ್ಟು , ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ,ಕಾರ್ಯಾಧ್ಯಕ್ಷ ರವೀಂದ್ರ ಕೋಟ ಉಪಸ್ಥಿತರಿದ್ದರು.
ಸಾಲಿಗ್ರಾಮ ಕಯಾಕಿಂಗ್ ತಂಡ ಈ ಬಾರಿ ಸೀತಾ ನದಿಯ ಮದ್ಯದಲ್ಲಿ ಕಾಂಡ್ಲಾ ಮರದ ನಡುವೆ ಕಾಂಡ್ಲಾ ನಡಿಗೆ ಸೇತುವೆ ರಚಿಸಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಉದ್ಯಮಿಗಳಾದ ಪ್ರಮೋದ್ ಮದ್ವರಾಜ್ ಅವರು ಧ್ವಜಾರೋಹಣ ಗೈದರು. ಈ ಸಂದರ್ಭದಲ್ಲಿ ಸಾಲಿಗ್ರಾಮ ಕಯಾಕಿಂಗ್‌ನ ಮುಖ್ಯಸ್ಥರಾದ ಮಿಥುನ್ ಕುಮಾರ್ ಮೆಂಡನ್ & ಲೋಕೇಶ್ ಮತ್ತಿತರು ಉಪಸ್ಥಿತರಿದ್ದರು .
ಬೈಂದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ನೆರೆವೆರೆಸಿದರು.
ಈ ವೇಳೆ ಶಾಲೆಯ ಹಳೆ ವಿಧ್ಯಾರ್ಥಿ ಮತ್ತು ಉದ್ಯಮಿಗಳಾದ ಸುಭಾಷ್ ಪೂಜಾರಿಯವರು ಕೊಡುಗೆಯಾಗಿ ನೀಡಿದ 9 ಲಕ್ಷದ ಮೌಲ್ಯದ ಶಾಲಾ ವಾಹನವನ್ನು ಹಸ್ತಾಂತರಿಸಿದರು.
ದಾನಿಗಳಾದ ಸುಭಾಷ್ ಪೂಜಾರಿ ಹಾಗೂ ಶಾಲೆಯ ವಾಹನ ಇಂಧನ ವ್ಯೆವಸ್ಥೆ ಮಾಡಿದ ರಾಜೇಶ್ ಪೂಜಾರಿ ಇವರನ್ನು ಕೂಡಾ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಲಯ ಶಿಕ್ಷಣ ಸಂಯೋಜಕರಾದ ಚಂದ್ರ ದೇವಾಡಿಗ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ, ಶಂಕರ ಪೂಜಾರಿ, ಬಿ.ಜೆ.ಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಯದರ್ಶಿ ಸುಧಾಕರ ಮೋಗವೀರ, ಎಸ್.ಡಿ.ಎಂ.ಸಿ ಸದಸ್ಯೆ ನಾಗವೇಣಿ, ವಿಧ್ಯಾರ್ಥಿ ನಾಯಕ ವಿನಿತ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯರಾದ ಮುಕ್ತಾ , ಸಹಶಿಕ್ಷಕಿ ಸಾರೀಕಾ, ಸಂಗೀತ ಉಪಸ್ಥಿತರಿದ್ದರು.
ಕಾರ್ಕಳದ ತಾಂಡವ ಫ್ರೆಂಡ್ಸ್ ಕಾರ್ಲ ಹಾಗೂ ಸರಕಾರಿ ಜಿಲ್ಲಾ ಆಸ್ಪತ್ರೆ ಅಜ್ಜೆರಕಾಡು ಇವರ ಜಂಟಿ ಸಹಯೋಗದಲ್ಲಿ ದೇಶದ 78ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಈ ಪ್ರಯುಕ್ತ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಸದ್ಭಾವನ ನಗರ ಬಂಗ್ಲೆಗುಡ್ಡೆಯಲ್ಲಿ ಬ್ರಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 64 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕಾರ್ಕಳದಲ್ಲಿ ದೇಶದ 78 ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಆರ್ ಸಿ ಸಿ ಗುತ್ತಿಗೆದಾರರ ಸಂಘದ ವತಿಯಿಂದ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳ ಯೋಗಕ್ಷೇಮ ವಿಚಾರಿಸಿ ಅವರಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ಬಿಸ್ಕೆಟ್ ವಿತರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಆರ್ ಸಿ ಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ದಾಮೋದರ್ ಆಚಾರ್ಯ, ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ಕ್ರೀಡಾಕಾರ್ಯದರ್ಶಿ ಗಣೇಶ್ ಜೋಡುರಸ್ಥೆ, ಅಬ್ದುಲ್ ರಹಿಮಾನ್ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪ್ರಶಾಂತ್ ಸಾಲಿಯಾನ್, ರಜಾಬ್ ನದೀಮ್ ಹಾಗೂ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅನಂತ್ ಕಾಮತ್ ಹಾಗೂ ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಡುಪಿಯ ಅಬ್ದುಲ್ ಕಲಾಂ ಆಟೋ ನಿಲ್ದಾಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ರಿಜಿಸ್ಟ್ರಾರ್ ಅಫೀಸರ್ ಪುಂಡಲೀಕ ಶಂಕರನಾರಾಯಣ ಅವರು ಧ್ವಜಾರೋಹಣ ನೆರವೇರಿಸಿದರು.
ಆಟೋ ನಿಲ್ದಾಣಕ್ಕೆ ನೂತನ ಧ್ವಜ ಸ್ತಂಭವನ್ನು ಕೊಡುಗೆಯಾಗಿ ನೀಡಿರುವ ಪ್ಯೂರ್ ನ್ಯಾಚುರಲ್ ಹರ್ಟ್ಸ್ ಪ್ರೈ.ಲಿ ಸಂದೀಪ್ ಅವರಿಗೆ ಅಭಿನಂಧನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಂಭು ಮಣಿಪಾಲ, ಸಹನಶೀಲ ಪೈ ಐರೋಡಿ ಹಾಗೂ ದಿನೇಶ್, ನಿಲ್ದಾಣದ ಅಧ್ಯಕ್ಷ ಪರಮೇಶ್ವರ, ಕಾರ್ಯದರ್ಶಿ ನಿತಿನ್, ಕೋಶಾಧಿಕಾರಿ ದಿವಾಕರ, ನಿಲ್ದಾಣದ ಪದಾಧಿಕಾರಿಗಳು, ಸದಸ್ಯರು ಹಾಗೂ ಉಡುಪಿ ಜಿಲ್ಲಾ ಸಿಟಿ ಸೆಂಟರ್ ಮತ್ತು ಅಜ್ಜರಕಾಡು ಆಟೋ ನಿಲ್ದಾಣದ ಸದಸ್ಯರು ಉಪಸ್ಥಿತರಿದ್ದರು.
ಉದ್ಯಾವರದ ಮೇಲ್ಪೇಟೆಯ ಆಟೋ ರಿಕ್ಷಾ ಯೂನಿಯನ್‌ನ ವತಿಯಿಂದ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿಯ ಅನಿವಾಸಿ ಉದ್ಯಮಿ , ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜ ಸೇವಕರಾದ ಡಾ.ಶೇಖ್ ವಾಹಿದ್ ಹಾಗೂ ಆಟೋ ಯೂನಿಯನ್‌ನ ಸದಸ್ಯರು ಉಪಸ್ಥಿತರಿದ್ದರು.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯ ಕಾರವಾರ ಇದರ ಶಿರ್ವಾ ಶಾಖೆ ವತಿಯಿಂದ ಆಕ್ಸಿಲಿಯಮ್ ನಿವಾಸದ ಮಕ್ಕಳಿಗೆ ಬೆಡ್‌ಶೀಟ್ ಮತ್ತು ಸಿಹಿ ತಿಂಡಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಶಿರ್ವಾ ಚರ್ಚಿನ ಪ್ರಧಾನ ಧರ್ಮಗುರು ಫಾ| ಲೆಸ್ಲಿ ಡಿಸೋಜ, ಶಿರ್ವಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಪೂಜಾರಿ , ಉಪಾಧ್ಯಕ್ಷ ವಿಲ್ಸನ್ ರೋಡ್ರಿಗಸ್ ವಾರ್ಡಿನ ಸದಸ್ಯೆ ಜೆಸಿಂತಾ ಡಿಸೋಜ ಹಾಗೂ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ನಾ, ಸೈಂಟ್ ಮಿಲಾಗ್ರಿಸ್ ಸಹಕಾರಿಯ ಶಿರ್ವಾ ಶಾಖಾ ವ್ಯವಸ್ಥಾಪಕಿ ಪ್ರಮೀಳ ಲೋಬೋ, ಸಹಾಯಕ ವ್ಯವಸ್ಥಾಪಕ ವಿಲ್ಸನ್ ಡಿಸೋಜ , ಶಾಖಾ ಸಿಬ್ಬಂದಿ ಬ್ಲೆಸ್ಸಿ ಜಾರ್ಜ್, ಆಕ್ಸಿಲಿಯಮ್ ಕಾನ್ವೆಂಟಿನ ಮೇಲ್ವಿಚಾರಕಿ ಸೀ.ಲೀಮಾ ಹಾಗೂ ಇತರ ಧರ್ಮಭಗಿನಿಯರು ,ಶಿರ್ವಾ ಶಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.