ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ- ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ಹೆಬ್ರಿ ಆ.14 (ಉಡುಪಿ ಟೈಮ್ಸ್ ವರದಿ) : ಶಿವಮೊಗ್ಗದ ಇಂಡೋ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಕುಬುಡೊ ಬುಡೋಕಾನ್ ಕರಾಟೆ ಡೋ ಅಸೋಸಿಯೇಶನ್ ಕರ್ನಾಟಕ ಸಂಸ್ಥೆ ಹಾಗೂ ಚಾಣಕ್ಯ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಕಟಾ ವಿಭಾಗದಲ್ಲಿ ಟ್ರೋಫಿಯೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಕ್ರೀಡಾಕೂಟದಲ್ಲಿ ಭಾರತದ ವಿದ್ಯಾರ್ಥಿಗಳು ಮಾತ್ರವಲ್ಲದೆ ಶ್ರೀಲಂಕಾ, ಭೂತಾನ್, ನೇಪಾಳ, ಬಾಂಗ್ಲಾದೇಶ, ದುಬೈ ರಾಷ್ಟ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದು ಕುಬುಡೊ ಬುಡೋಕಾನ್ ಕರಾಟೆ ಡೋ ಅಸೋಸಿಯೇಶನ್ ಕರ್ನಾಟಕ ಸಂಸ್ಥೆ ಹಾಗೂ ಚಾಣಕ್ಯ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಯರಾದ ಶತ್ರುಘ್ನ ಶೆಟ್ಟಿ ಸೀತಾನದಿ ,ಟೆಸ್ಲಿಟ್, ರಚಿತಾ ಕುಲಾಲ್ ಕಬ್ಬಿನಾಲೆ , ಕ್ರಿಸ್ಟಿನಾ ಟ್ಯಾಲೀಯ, ಟಿಯೋನ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ವಿದ್ಯಾರ್ಥಿಗಳಿಗೆ ಚಾಣಕ್ಯ ಕರಾಟೆ ತರಬೇತಿ ಕೇಂದ್ರದ ಗುರುಗಳಾದ ರೆನ್ಸಿ ಸೋಮನಾಥ ಸುವರ್ಣ ಮತ್ತು ಡಾ. ವಿಜಯಲಕ್ಷ್ಮಿ ಆರ್. ನಾಯಕ್ ತರಬೇತಿ ನೀಡಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಹೆಬ್ರಿ ಚಾಣಕ್ಯ ಸಮೂಹ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.