ಉಡುಪಿ: ಎಪಿಎಂಸಿ ಮಾರುಕಟ್ಟೆ ದುರಾವಸ್ಥೆ- ವರ್ತಕರ ಪ್ರತಿಭಟನೆ

ಉಡುಪಿ ಆ.13(ಉಡುಪಿ ಟೈಮ್ಸ್ ವರದಿ): ಆದಿ ಉಡುಪಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಆವರಣದ ದುರಾವಸ್ಥೆಯನ್ನು ಖಂಡಿಸಿ ಇಲ್ಲನ ವರ್ತಕರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಇಂದು ಕಪ್ಪು ಬಾವುಟ ಹಲವು ದಿನಗಳಿಂದ ಪ್ರತಿಭಟನೆ ನಡೆಸಿದರು.

ಈ ನಡುವೆ ವರ್ತಕರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಯು ಜೀಪಿನಿಂದ ಇಳಿಯದೇ ವರ್ತಕರೊಂದಿಗೆ ಮಾತನಾಡಿದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೂ ತಮ್ಮ ಅಳಲನ್ನು ಹೇಳಿಕೊಳ್ಳುತ್ತಿರುವ ವ್ಯಾಪಾರಿಗಳೊಂದಿಗೆ ಈ ರೀತಿಯ ದರ್ಪದ ವರ್ತನೆ, ಅಧಿಕಾರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಬಗ್ಗೆ ಮಾತನಾಡಿದ ವರ್ತಕ ಫಯಾಸ್‌ ಅಹಮ್ಮದ್‌ ಅವರು, ಎಪಿಎಂಸಿಯ ಶೌಚಾಲಯದಲ್ಲಿ ಒಂದು ಹನಿ ನೀರಿಲ್ಲ. ಪ್ರತಿದಿನ ಕಸ ವಿಲೇವರಿ ಮಾಡದೆ ರಾಶಿ ಬಿದ್ದು, ಗಬ್ಬು ನಾರುತ್ತದೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಎಪಿಎಂಸಿ ಪ್ರಾಂಗಣ ಅವ್ಯವಸ್ಥೆಗಳ ಆಗರವಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವರ್ತಕ ಪ್ರಭುಗೌಡ ಅವರು ಮಳೆ ಬಂದರೆ ಎಪಿಎಂಸಿ ಆವರಣದಲ್ಲಿ ನೀರು ತುಂಬಿಕೊಳ್ಳುತ್ತದೆ. ಅದರಲ್ಲೇ ವ್ಯಾಪಾರ ಮಾಡುವ ಅನಿವಾರ್ಯತೆ ನಮಗಿದೆ. ವಾರದ ಸಂತೆಯ ದಿನ ಇಲ್ಲಿನ ಅವ್ಯವಸ್ಥೆ ಕಂಡು ಗ್ರಾಹಕರು ನಮ್ಮನ್ನು ಬೈತಾರೆ ಎಂದು ಆಳಲನ್ನು ತೋಡಿಕೊಂಡರು.

ಈ ವೇಳೆ ಸ್ಥಳಕ್ಕೆ ಎಪಿಎಂಸಿಯ ಪ್ರಭಾರ ಕಾರ್ಯದರ್ಶಿ ಗೋಪಾಲ್‌ ತಿಪ್ಪಣ್ಣ ಕಾಕನೂರ ಅವರು ಭೇಟಿ ನೀಡಿ, ಯಾಕೆ ಪ್ರತಿಭಟನೆ ನಡೆಸುತ್ತಿದ್ದೀರಿ. ಜನರಿಗೆ ತೊಂದರೆ ನೀಡಬೇಡಿ ಎಂದು ತಿಳಿಸಿದ್ದಾರೆ.

ಪತ್ರಿಭಟನೆಯಲ್ಲಿ ವರ್ತಕರಾದ ಚಂದಪ್ಪ, ಲಕ್ಷ್ಮಣ್‌, ಓಬಳೇಶ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!