ಉಡುಪಿ: ಹಿಂದಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಯು. ಎಸ್. ರಾಜಗೋಪಾಲ ಆಚಾರ್ಯ
ಉಡುಪಿ ಆ.12(ಉಡುಪಿ ಟೈಮ್ಸ್ ವರದಿ): ಹಿಂದಿ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ಯು. ಎಸ್. ರಾಜಗೋಪಾಲ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ 64 ನೇ ವಾರ್ಷಿಕ ಮಹಾಸಭೆಯಲ್ಲಿ ಹಿಂದಿ ಪ್ರಚಾರ ಸಮಿತಿ ಉಡುಪಿಯ 2024-2025ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಅಂಕಣಕಾರ ಡಾ. ಏನ್. ವಿಶ್ವನಾಥ್ ಕಾಮತ ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ಮುಕ್ತಾ ಶೆಣೈ, ಕಾರ್ಯದರ್ಶಿಯಾಗಿ ಲೆಕ್ಕ ಪರಿಶೋಧಕ ಮತ್ತು ಸಂಪನ್ಮೂಲ ವ್ಯಕ್ತಿಯಾಗಿರುವ ಗುಜ್ಜಾಡಿ ಪ್ರಭಾಕರ ನಾಯಕ್, ಜತೆ ಕಾರ್ಯದರ್ಶಿಯಾಗಿ ನಿವೃತ್ತ ಅಧ್ಯಾಪಕಿ ವಸಂತಿ ಮತ್ತು ಕೋಶಾಧಿಕಾರಿಯಾಗಿ ಲೆಕ್ಕ ಪರಿಶೋಧನಾ ಸಹಾಯಕಿ ಪದ್ಮಾವತಿ ಮೊಗೇರ್ ಅವರನ್ನು ಆಯ್ಕೆ ಮಾಡಲಾಯಿತು.
ಇದರೊಂದಿಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಧ್ಯಾಪಕಿ ಸವಿತಾ ಬಿ ಕೆ ಆಚಾರ್ಯ, ಅಧ್ಯಾಪಕಿ ಪ್ರಭಾತ ಪಾಟೀಲ್, ಜಯವಂತ್ ಕಾಮತ್, ಮಧುಕೇಶ್ವರ ಪಿ. ಹೆಗ್ಡೆ ಅಲ್ತಾಫ್ ಅಹಮದ್, ತೆರಿಗೆ ಸಲಹೆಗಾರ ದೀಪಕ್ ಶೈಣೈ ಅಧ್ಯಾಪಕಿ ನಿಲೋಫರ್, ವಕೀಲ ಕೆ. ಜಯಪ್ರಕಾಶ್ ಕೆದ್ಲಾಯ, ವರಿಷ್ಠ ಹಿಂದಿ ಪ್ರಚಾರಕಿ ಉ. ಶಕುಂತಲಾ ಅವರು ಆಯ್ಕೆಯಾದರು.
ಈ ವೇಳೆ ಸಭೆಯಲ್ಲಿ ಕರ್ನಾಟಕ ಸರಕಾರದ ವಿದ್ಯಾ ಇಲಾಖೆಯ ಸಹಯೋಗದಲ್ಲಿ ಉಡುಪಿ ಪರಿಸರದ ಹಿಂದಿ ಪ್ರಚಾರಕರು ಮತ್ತು ಹಿಂದಿ ಭಾಷಾ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ, ಮಹಿಳೆಯರಿಗಾಗಿ ಹಿಂದಿ ಭಾಷಾ ಸಂಭಾಷಣಾ ಶಿಬಿರ. 77ನೇ ಸ್ವಾತಂತ್ರ್ಯ ದಿನಾಚರಣೆ, ಹಿಂದಿ ದಿನಾಚರಣೆ, 76ನೇ ವಾರ್ಷಿಕೋತ್ಸವ ಮತ್ತು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪರೀಕ್ಷೆಗಳನ್ನು ನಡೆಸಲು ನಿರ್ಣಯಿಸಲಾಯಿತು.