ಶಿರ್ವ : ಮಕ್ಕಳಿಗಾಗಿ “ನಮ್ಮ ನಡೆ ಕೃಷಿಯ ಕಡೆ” ಕಾರ್ಯಕ್ರಮ
ಶಿರ್ವ ಆ.12(ಉಡುಪಿ ಟೈಮ್ಸ್ ವರದಿ): ಹೇರೂರು ಬಂಟಕಲ್ಲಿನ ಉದ್ಯಮಿ ಹಾಗೂ ಕೃಷಿಕರಾಗಿರುವ ವಿಜಯ ಧೀರಜ್ ಅವರ ಗದ್ದೆಯಲ್ಲಿ ಶಾಲಾ ಮಕ್ಕಳಿಗಾಗಿ ನಮ್ಮ ನಡೆ ಕೃಷಿಯ ಕಡೆ ಎಂಬ ವಿನೂತನ ಕಾರ್ಯಕ್ರಮ ಕೈಗೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶಿರ್ವದ ಡೋನ್ ಬೋಸ್ಕೋ ಇಂಗ್ಲಿಷ್ ಮಾಧ್ಯಮ ಶಾಲೆಯ ಸ್ಕೌಟ್ ಅಂಡ್ ಗೈಡ್ ಮಕ್ಕಳು ಸೇರಿದಂತೆ ಸುಮಾರು 100 ಮಕ್ಕಳು ಭಾಗವಹಿಸಿದ್ದು. ಈ ಮಕ್ಕಳಿಗೆ ನೇಜಿ ನಡುವ ಪ್ರತ್ಯಕ್ಷತೆ, ಭತ್ತ ಬೆಳೆಯ ಮಾಹಿತಿ ಹಾಗೂ ರೈತರ ಸೇವೆಯ ಬಗ್ಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯದಲ್ಲಿ ಉದ್ಯಮಿ, ಕೃಷಿಕ ವಿಜಯ್ ಧೀರಜ್ ಅವರು ಮಾತನಾಡಿ, ನಾವು ನಿಮ್ಮನ್ನು ರೈತರನ್ನಾಗಿ ಮಾಡಲು ಕಲಿಸುತ್ತಿಲ್ಲ, ಆದರೆ ನೀವು ರೈತರು ಹೇಗೆ ಬದುಕುತ್ತಾರೆ ಮತ್ತು ನಾವು ಊಟ ಮಾಡುವ ಅಕ್ಕಿ ಹೇಗೆ ಮತ್ತು ಎಲ್ಲಿಂದ ತಯಾರು ಆಗುತ್ತದೆ ಎಂಬ ಮಾಹಿತಿಯನ್ನು ನೀಡಲು ನಿಮ್ಮನ್ನು ಇಲ್ಲಿ ಕರೆದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿರ್ವ ಶಾಲೆಯ ಕರೆನ್ಪಾಂಡೆಂಟ್ ರೆ.ಫಾ.ಲೆಸ್ಲಿ ಡಿಸೋಜಾ, ಪ್ರಾಂಶುಪಾಲರಾದ ರೆ. ಫಾ ರೋಲ್ವಿಯನ್ ಜೋಯ್ ಅರನ್ನ, ಲಯನ್ಸ್ ಕ್ಲಬ್ ಬಂಟಕಲ್ಲು, ಇದರ ಅಧ್ಯಕ್ಷರು ಲ. ಉಮೇಶ್ ಕುಲಾಲ್, ಲ. ಉಮೇಶ್ ಉಪಸ್ಥಿತರಿದ್ದರು.