ಉಡುಪಿ: ವಿದೇಶಿ ನಗ-ನಗದಿನ ಆಮೀಷ – ಮಹಿಳೆಗೆ 11.94 ಲ.ರೂ. ವಂಚನೆ
ಉಡುಪಿ ಆ.12(ಉಡುಪಿ ಟೈಮ್ಸ್ ವರದಿ): ವಿದೇಶಿ ನಗ- ನಗದಿನ ಆಸೆ ತೋರಿಸಿ ಮಹಿಳೆಯೊಬ್ಬರಿಗೆ 11.94 ಲ.ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಕಾರ್ಕಳದ ಕುಂಟಿಬೈಲು ನಿವಾಸಿ ವಿದ್ಯಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾ ಅವರಿಗೆ ಮಾರ್ಕ್ ಸೀಮಾ ಎಂಬ ಫೇಸ್‌ಬುಕ್ ಖಾತೆ ಮೂಲಕ ಪರಿಚಯವಾದ ಅಪರಿಚಿತೆಯೊಬ್ಬಳು ವಿಳಾಸವನ್ನು ಪಡೆದುಕೊಂಡಿದ್ದಳು. ಬಳಿಕ ಸುನಿತಾ ಕುಮಾರಿ ಎಂಬವರು ಲಂಡನ್ ನಿಂದ ಚಿನ್ನದ ವಸ್ತು ಮತ್ತು ಪೌಂಡು ಹಣ ಪಾರ್ಸೆಲ್ ಬಂದಿದೆ ಎಂದು ಹೇಳಿ ಅದರ ಕಸ್ಟಮ್ ಚಾರ್ಜ್ ಹಾಗೂ ಐ.ಟಿ ರೈಡ್ ಮಾಡುವುದಾಗಿ ಬೆದರಿಸಿ ಹಂತ ಹಂತವಾಗಿ ಖಾತೆಗೆ ಹಾಗೂ ಗೂಗಲ್‌ಪೇ ಮೂಲಕ ಓಟ್ಟು ರೂ. 11,94,490 ಯನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.