ಹೆಬ್ರಿಗೆ ಇಂಡಿಯಾ ಒನ್ ಎಟಿಎಂನ ಆಗ್ರಹ
ಹೆಬ್ರಿ ಆ.10(ಉಡುಪಿ ಟೈಮ್ಸ್ ವರದಿ): ಹೆಬ್ರಿ ಗ್ರಾಮಕ್ಕೆ ಇಂಡಿಯಾ ಒನ್ ಎಟಿಎಂ ಬೇಕಾಗಿದೆ ಎಂಬ ಆಗ್ರಹ ಕೇಳಿ ಬಂದಿದೆ
ಹೆಬ್ರಿಗೆ ಬೇರೆ ಬೇರೆ ಗ್ರಾಮಗಳಿಂದ ಅನೇಕ ಬಂದಿ ಬರುತ್ತಾರೆ. ಹೀಗೆ ಬರುವ ಬಹಳಷ್ಟು ಮಂದಿ ಬಸ್ಸುಗಳಿಂದ ಇಳಿದು ಹಣದ ಅಗತ್ಯತೆಗೆ 200-300 ಮೀಟರ್ ಹೊಗಬೇಕಾಗುತ್ತದೆ. ಆದ್ದರಿಂದ ಬಸ್ಸು ನಿಲ್ದಾಣ ಹತ್ತಿರ ಇಂಡಿಯಾ ಒನ್ ಎಟಿಮ್ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ಕೋರಿಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಹೆಬ್ರಿ ತಾಲೂಕು ಕಛೇರಿ ಇದ್ದರಿಂದ ಬೇರೆ ಬೇರೆ ಗ್ರಾಮಗಳಿಂದ ಜನರು ತಮ್ಮ ಕೆಲಸಕ್ಕಾಗಿ ಬರುತ್ತಾರೆ. ಅವರಿಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಇಲ್ಲಿ ಹೆಬ್ರಿ ಗ್ರಾಮದಲ್ಲಿ ಖಾಸಗಿ ಶಾಲೆ,ಕಾಲೇಜು, ಸರಕಾರಿ ಶಾಲೆ ಕಾಲೇಜು, ಬ್ಯಾಂಕು, ತಾಲೂಕು ಕಛೇರಿ ಕೆಲಸಗಳಿಗಾಗಿ ಹಣಕ್ಕಾಗಿ ಅಲೆದಾಟ ಮಾಡಬೇಕಾಗುತ್ತದೆ. ಈಗ ಹೆಚ್ಚಿನ ಕಡೆಯಲ್ಲಿ ಕೆಲವು ಖಾಸಗಿ ಬ್ಯಾಂಕುಗಳಲ್ಲಿ ಹಣ ಬೇಕಾದರೆ ಡೆಬಿಟ್ ಕಾರ್ಡು, ಮತ್ತು ಚೆಕ್ ಮೂಲಕ ಹಣ ಡ್ರಾ ಮಾಡಬೇಕಾಗುತ್ತದೆ. ಇದರಿಂದ ಕೆಲವೊಮ್ಮೆ ಹೆಚ್ಚುವರಿ ಚಾರ್ಜ್‌ಗಳು ಕಟ್ಟಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಇಂಡಿಯಾ ಒನ್ ಎಟಿಮ್‌ನಲ್ಲಿ ಬೇರೆ ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡು ಉಪಯೋಗಿಸಿದರೆ ಯಾವುದೇ ರೀತಿಯ ಚಾರ್ಜುಗಳು ಇರುವುದಿಲ್ಲ. ಆದ್ದರಿಂದ ಹೆಬ್ರಿ ಬಸ್ಸು ನಿಲ್ಲಾಣದಲ್ಲಿ ಇಂಡಿಯಾ ಒನ್ ಎಟಿಮ್ ಇದ್ದರೆ ಜನರಿಗೆ ಸಹಾಯ ಆಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.