ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಪ್ರೋತ್ಸಾಹಿಸಲು ಈ ರೀತಿ ಮಾಡಿ….
ಉಡುಪಿ ಆ.7(ಉಡುಪಿ ಟೈಮ್ಸ್ ವರದಿ): ಪ್ರವಾಸೋದ್ಯಮ ಅವಕಾಶಗಳನ್ನು ಹೆಚ್ಚಿಸಲು ಮತ್ತು ವಿವಿಧ ಪ್ರವಾಸಿ ತಾಣಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ, ನೈಸರ್ಗಿಕ, ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳಂತಹ ವಿವಿಧ ಅಂಶಗಳನ್ನು ಉತ್ತೇಜಿಸಲು ಪ್ರವಾಸೋದ್ಯಮ ಸಚಿವಾಲಯವು “ದೇಖೋ ಅಪ್ನಾ ದೇಶ್; ಪೀಪಲ್ಸ್ ಚಾಯ್ಸ್ 2024” ಅನ್ನು ಪ್ರಾರಂಭಿಸಿದೆ.
ಈ ಕಾರ್ಯಕ್ರಮದ ಭಾಗವಾಗಿ, ತಮ್ಮಿಷ್ಟದ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಲು ಮತ್ತು ಆಯ್ಕೆ ಮಾಡಲು ಪ್ರವಾಸಿ ಪ್ರಿಯರಿಗೆ ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಕರಾವಳಿಯ ಪ್ರವಾಸಿ ಪ್ರಿಯರು ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಮತ ನೀಡಿ ಪ್ರೋತ್ಸಾಹಿಸುವ ಕೋರಲಾಗಿದೆ.
ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಧ್ಯತೆ ನೀಡಿ ವೋಟ್ ಮಾಡಲು https://innovateindia.mygov.in/dekho-apna-desh/ ಭೇಟಿ ನೀಡಿ ವೋಟ್ ಮಾಡಬಹುದಾಗಿದೆ.