ಕುಂದಾಪುರ: ಕೆಸರಲ್ಲೊಂದು ದಿನ – ಗಮ್ಮತ್ ದಿನದ ಪೋಸ್ಟರ್ ಅನಾವರಣ

ಕುಂದಾಪುರ ಆ.3(ಉಡುಪಿ ಟೈಮ್ಸ್ ವರದಿ):ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ವತಿಯಿಂದ ವಿಶ್ವ ಕುಂದಾಪ್ರ ಕನ್ನಡದ ದಿನಾಚರಣೆಯ ಅಂಗವಾಗಿ ಅ. 25ರ ಭಾನುವಾರ ಆಯೋಜಿಸಲಾಗಿರುವ ‘ಕೆಸರಲ್ಲೊಂದು ದಿನ – ಗಮ್ಮತ್’ ಬೃಹತ್ ಗ್ರಾಮೀಣ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಪೋಸ್ಟರ್‌ನ್ನು ಅನಾವರಣಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ, ವಕೀಲರಾದ ಎ.ಎಸ್.ಎನ್. ಹೆಬ್ಬಾರ್ ಅವರು ಮಾತನಾಡಿ, ಕುಂದಾಪ್ರ ಕನ್ನಡ ಭಾಷೆಗೆ ಅದರದ್ದೇ ಆದ ಗತ್ತು ಗೈರತ್ತಿದೆ. ಹತ್ತಾರು ಬಗೆಯ ಪದಪ್ರಯೋಗಳಿರುವ ಕುಂದಾಪ್ರ ಕನ್ನಡವು ಕನ್ನಡ ಭಾಷೆಯ ವಿಶಿಷ್ಟ ಪ್ರಾಕಾರವಾಗಿದೆ. ಭಾಷೆ ಬದುಕಿನೊಂದಿಗೆ ಬೆಸೆದುಕೊಂಡು ಸಂಭ್ರಮಿಸುವ ದಿನಗಳನ್ನು ನೋಡುವುದೇ ಖುಷಿ. ಭಾಷೆಯ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಎಂದಿಗೂ ಮೆರಗು, ಗಮ್ಮತ್ ಕಾರ್ಯಕ್ರಮಕ್ಕೂ ಶುಭವಾಗಲಿ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಪ್ರತಿನಿಧಿಗಳಾದ ಶರತ್ ಶೆಟ್ಟಿ ಉಪ್ಪುಂದ, ಪ್ರಸಾದ್ ಪ್ರಭು ಶಿರೂರು, ದಿವಾಕರ ಶೆಟ್ಟಿ ನೆಲ್ಯಾಡಿ, ಕಿಶೋರ್ ಪೂಜಾರಿ ಸಸಿಹಿತ್ಲು, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಸುನಿಲ್ ಹೆಚ್. ಜಿ. ಬೈಂದೂರು,  ಎ.ಎಸ್.ಎನ್. ಹೆಬ್ಬಾರ್ ಅವರ ಪತ್ನಿ ಸುಧಾ ಹೆಬ್ಬಾರ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!