ಪ್ರಮಾಣಿಕತೆ ಹಾಗೂ ನಿಯತ್ತಿನಿಂದ ದುಡಿಯುವವರು ಆಶಾ ಕಾರ್ಯಕರ್ತೆಯರು : ಕೆ ವಿ ಭಟ್

ಕಾರ್ಕಳ ಆ.3(ಉಡುಪಿ ಟೈಮ್ಸ್ ವರದಿ): ಅತ್ಯಂತ ಪ್ರಮಾಣಿಕತೆ ಹಾಗೂ ನಿಯತ್ತಿನಿಂದ ದುಡಿಯುವ ಕಾರ್ಯಕರ್ತರಿದ್ದರೆ ಅದು ಅಶಾ ಕಾರ್ಯಕರ್ತರು ಎಂದು ಎಐಯುಟಿಯುಸಿ ರಾಜ್ಯಾ ಉಪಾಧ್ಯಕ್ಷ ಕೆವಿ ಭಟ್ ಅವರು ಹೇಳಿದ್ದಾರೆ.

ಅನಂತಶಯನ ರೋಟರಿ ಕ್ಲಬ್‌ನಲ್ಲಿ ನಡೆದ ಕಾರ್ಕಳ ತಾಲೂಕು ಆಶಾ ಕಾರ್ಯಕರ್ತೆಯರ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಕಡಿಮೆ ವೇತನದಲ್ಲಿ ಅತೀ ಹೆಚ್ಚು ಇಲಾಖೆಯ ಕೆಲಸ ನಿರ್ವಹಿಸುತ್ತಿರುವುದು ಆಶಾ ಕಾರ್ಯಕರ್ತೆಯರು. ಅವರ ಬದುಕು ಜೀವನ ಬಗ್ಗೆ ಸರ್ಕಾರ ಗಮನ ಕೊಟ್ಟು ಅವರ ಬೇಡಿಕೆಯನ್ನು ಪೂರೈಸಿ ಅವರನ್ನು ಸರ್ಕಾರಿ ನೌಕರೆಂದು ಪರಿಗಣಿಸ ಬೇಕು ಎಂದರು.

ತಳಮಟ್ಟದಲ್ಲಿ ಸಂಘಟನೆಗಳು ಬಲವಾದ್ದಲ್ಲಿ ನಮ್ಮ ಹೋರಾಟಕ್ಕೆ ಒಂದು ಅರ್ಥ ಸಿಗುತ್ತೆ. 1500 ರೂ. ಪ್ರೋತ್ಸಾಹ ಧನ ಸಿಗುತ್ತಿದ್ದ ಅಂಗನವಾಡಿ ಕಾರ್ಯರ್ತರಿಗೆ ಇಂದು ಹೋರಾಟದ ಫಲವಾಗಿ 7000 ರೂ ಸಿಗುವಂತಾಗಿದೆ. ಆಶಾ‌ ಕಾರ್ಯಕರ್ತೆಯರು ಇಂದು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ಹಾಗೂ ಇಲಾಖೆಯ ಪ್ರತಿಯೊಂದು ಯೋಜನೆ, ಸವಲತ್ತುಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಕಾರ್ಯಗಳಲ್ಲಿಯೂ ಹೆಜ್ಜೆ ಹಾಕುತ್ತಿದ್ದಾರೆ. ಇದೆಲ್ಲಾ ಕೆಲಸವನ್ನು ಬರೀ ಕಡಿಮೆ ವೇತನದಲ್ಲಿ ಮಾಡುತ್ತಿರುವುದು ಅತ್ಯಂತ ಶೋಚನೀಯ. ಸಿಗುವ ಕಡಿಮೆ ವೇತನದಲ್ಲಿ ಮನೆಯ ಜವಾಬ್ದಾರಿ  ಹೇಗೆ ನಿಭಾಯಿಸುವುದು ಎಂಬ ಚಿಂತೆ ಅವರಲ್ಲಿ ‌ಕಾಡುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!