ಕಟಪಾಡಿಯಲ್ಲಿ “ಜೋಕ್ಲೆಗಾದ್ ಆಟಿದ ತಿರ್ಲ್” ಕಾರ್ಯಕ್ರಮ

ಶಿರ್ವ ಆ.4(ಉಡುಪಿ ಟೈಮ್ಸ್ ವರದಿ): ಯುನಿರ್ಸಿಟಿಗಳು ಡೀಮ್ಡ್ ಯೂನಿವರ್ಸಿಟಿಗಳಾಗಿ ಬದಲಾಗುತ್ತಿರುವುರಿಂದ ತುಳು ಕೋಟಾಕ್ಕೆ  ತೊಡಕಾಗಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ತಿಳಿಸಿದ್ದಾರೆ.

ತುಳುಕೂಟ ಉಡುಪಿ, ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜ್ ಕಟಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕಟಪಾಡಿ ತ್ರಿಶಾ ವಿದ್ಯಾ  ಕಾಲೇಜ್‌ನಲ್ಲಿ ನಡೆದ ಜೋಕ್ಲೆಗಾದ್ ಆಟಿದ ತಿರ್ಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಳು ಮಾತೃಭಾಷೆ ಮಾತನಾಡುವ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಬಯಸಿದ್ದಲ್ಲಿ ತುಳು ಕೋಟಾದಡಿ ವೈದ್ಯಕೀಯ ಕಾಲೇಜುಗಳಲ್ಲಿ ಅವಕಾಶ ವಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಟಪಾಡಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ, ತುಳುನಾಡಿನ ಮಣ್ಣಿನ ಸಂಸ್ಕೃತಿ ಶಕ್ತಿಶಾಲಿಯಾಗಿದೆ. ಈ ಮಣ್ಣಿನಲ್ಲಿ ಅನೇಕ ವಿಶೇಷತೆಗಳಿವೆ. ತುಳುನಾಡಿನಲ್ಲಿ ಹುಟ್ಟಿದ ನಾವೆಲ್ಲ ಧನ್ಯರು ಎಂದು ಹೇಳಿದರು.

ಈ ವೇಳೆ ತ್ರಿಶಾ ಪಿ.ಯು. ಕಾಲೇಜಿನ ವಿದ್ಯಾರ್ಥಿ ಭವೀಷ್ ಬೆಳ್ಳಾರೆ ಆಟಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ತುಳುನಾಡಿನ ಆಟಿ‌ಕಳೆಂಜನಿಗೆ ಪಡಿಯಕ್ಕಿ ಕೊಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ, ಕಟಪಾಡಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಸತ್ಯೇಂದ್ರ ಪೈ, ತ್ರಿಶಾ ವಿದ್ಯಾ ಪಿ.ಯು. ಕಾಲೇಜು ಪ್ರಾಂಶುಪಾಲ ಡಾ. ಅನಂತ್ ಪೈ,ಉಡುಪಿ ವಿಶ್ವನಾಥ ಶೆಣೈ,ಕಾರ್ಯಕ್ರಮ ಸಂಚಾಲಕಿ ವಿದ್ಯಾಸರಸ್ವತಿ, ಕಾರ್ಯದರ್ಶಿ ಗಂಗಾಧರ ಕಿದಿಯೂರ್  ಸೇರಾಲೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!