ಸಹ್ಯಾದ್ರಿ ಕಾಲೇಜ್: ಕೇಂದ್ರೀಕೃತ ವಾಕ್-ಇನ್-ಇಂಟರ್ವ್ಯೂ- ಯಾರೆಲ್ಲಾ ಭಾಗವಹಿಸ ಬಹುದು..
ಮಂಗಳೂರು ಆ.3 (ಉಡುಪಿ ಟೈಮ್ಸ್ ವರದಿ): ಬೆಂಗಳೂರಿನ ತಾಂತ್ರಿಕ ಶಿಕ್ಷಣ, ಕರ್ನಾಟಕ ಸರ್ಕಾರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಜಂಟಿಯಾಗಿ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಆ.6 ರಂದು ಬೆಳಿಗ್ಗೆ 9.30 ರಿಂದ ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಕೇಂದ್ರೀಕೃತ ವಾಕ್-ಇನ್ ಸಂದರ್ಶನವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ ಪ್ಲೇಸ್ಮೆಂಟ್ ಮತ್ತು ಟ್ರೇನಿಂಗ್‌ನ ಡೀನ್ ಪ್ರೊಫೆಸರ್ ರಶ್ಮಿ ಭಂಡಾರಿ ಅವರು ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ತರಬೇತಿ, ಸೌತ್ ರೀಜನ (SR) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ಪದವೀಧರರು, ಎಂಜಿನಿಯರ್‌ಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಪ್ರಾಯೋಗಿಕ ತರಬೇತಿಯನ್ನು ನೀಡುವ ಉದ್ದೇಶದಿಂದ ಹಿಂದಿನ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ `ಪ್ರಾಯೋಗಿಕ ತರಬೇತಿ ಸ್ಟೈಪೆಂಡಿಯರಿ ಯೋಜನೆ’ ಯನ್ನು ಪ್ರಾರಂಭಿಸಿತು. ವಾಕ್-ಇನ್-ಇಂಟರ್ವ್ಯೂ ಮೇಳದಲ್ಲಿ 20ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೆ ಕಂಪನಿಗಳು ಭಾಗವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಈ ಕೇಂದ್ರೀಕೃತ ವಾಕ್-ಇನ್-ಇಂಟರ್ವ್ಯೂನಲ್ಲಿ ಅಪ್ರೆಂಟಿಸ್ ಟ್ರೈನೀಸ್ ನವರಿಗೆ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು ಇಲ್ಲಿ ಆ.6 ರಂದು 8.30 ರಿಂದ ತರಬೇತಿ ಪ್ರಾರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಪದವೀಧರರಾಗಿರಬೇಕು. ಕಳೆದ 05 ವರ್ಷಗಳಿಂದ ಪಾಸಾದ ಅಂದರೆ ಅಭ್ಯರ್ಥಿಗಳು 2020, 2021, 2022 2023 ಮತ್ತು 2024 ರಲ್ಲಿ ಉತ್ತೀರ್ಣರಾದ ಪದವೀಧರರಾಗಿರಬೇಕು ಎಂದು ತಿಳಿಸಿದರು.
ಹಾಗೂ ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ ಇರುವುದಿಲ್ಲ. ವಿದ್ಯಾರ್ಥಿಗಳು NATS ಪೋರ್ಟಲ್‌ಗೆ (https://nats.education.gov.in) ದಾಖಲಾಗುವಂತೆ ಮತ್ತು ಕೇಂದ್ರೀಕೃತ ವಾಕ್-ಇನ್ ಸಂದರ್ಶನದ ಸಮಯದಲ್ಲಿ ದಾಖಲಾತಿ ಫಾರ್ಮ್ ಅನ್ನು ತರಬೇಕು. ಈ ವಾಕ್-ಇನ್-ಇಂಟರ್ವ್ಯೂನಲ್ಲಿ 30 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ. ಹೆಚ್ಚಿನ ಮಾಹಿತಿಗಾಗಿ http://boat-srp.com/news-and-events/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ ದೂರವಾಣಿ ಸಂಖ್ಯೆ 0824-22 777 66 ನ್ನು ಸಂಪರ್ಕಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಹ್ಯಾದ್ರಿ ಕಾಲೇಜು ಆಫ್ ಇಂಜೀನೀರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು ಇದರ ಪ್ರಾಂಶುಪಾಲರಾದ ಡಅ. ಎಸ್. ಎಸ್ ಇಂಜಗನೇರಿ, ಸಹ್ಯಾದ್ರಿ ಕಾಲೇಜಿನ ಸ್ಟ್ರಾಟಜಿಕ್ ಪ್ಲಾನಿಂಗ್ ವಿಭಾಗದ ಡೀನ್ ಪ್ರೊ.ರಮೇಶ್ ಕೆ ಜಿ ಉಪಸ್ಥಿತರಿದ್ದರು.