ಕೊರಗರ ಧರಣಿ ಮಿಂಚುವ ನಾಯಕರಿಗೆ ಆಹಾರವಾಗದಿರಲಿ: ಜಯನ್ ಮಲ್ಪೆ

ಉಡುಪಿ ಜು.29(ಉಡುಪಿ ಟೈಮ್ಸ್ ವರದಿ):  ಕೊರಗರ ನ್ಯಾಯಬದ್ಧ ಧರಣಿ ಹೋರಾಟಗಾರರಿಗೆ, ಜನಪ್ರತಿನಿಧಿಗಳಿಗೆ, ರಾಜಕಾರಣಿಗಳಿಗೆ ಆಹಾರವಾಗದಿರಲಿ ಎಂದು ಜನಪರಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ  ಅವರು ಹೇಳಿದ್ದಾರೆ.

ಮಣಿಪಾಲದಲ್ಲಿ ಕೊರಗರ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಉದ್ಯೋಗದ ಭರವಸೆ ಮತ್ತು ಕೃಷಿ ಭೂಮಿ ಹಕ್ಕು ಪತ್ರದ ಮಂಜೂರಾತಿಗಾಗಿ ಕಳೆದ ಎಂಟುದಿನಗಳಿಂದ ನಡೆಸುತ್ತಿರುವ ಸರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತಕ್ಕೆ ಮತ್ತು ಸರಕಾರಕ್ಕೆ ಕಣ್ಣ,ಮೂಗು,ಕಿವಿ,ಬಾಯಿ ಯಾವುದೂ ಇಲ್ಲವಾಗಿದೆ.ಈ ನೆಲದ ಮೂಲನಿವಾಸಿಗಳ ಬೇಡಿಕೆಯನ್ನು ಈಡೇರಿಸಲು ಅಸಾಧ್ಯವಾದರೆ ಕುರ್ಚಿ ಬಿಟ್ಟು ತೊಳಗಲಿ ಎಂದರು.

ಹಾಗೂ ಕೇವಲ ಬದುಕುವ ಹಕ್ಕಿಗಾಗಿ ಹೋರಾಟಮಾಡುತ್ತಿದ್ದರೂ ಜಿಲ್ಲಾಡಳಿತ ಮತ್ತು ರಾಜ್ಯಸರಕಾರ ಸ್ಪಂದಿಸದೆ ತೀರ ನಿರ್ಲಕ್ಷಮಾಡುತ್ತಿರುವುದರ ವಿರುದ್ದ ಹೋರಾಟನಡೆಸುತ್ತಿರುವುದನ್ನು ಬಿಟ್ಟು ಕೊರಗರ ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸಿದೆವು ಎಂದು ಹೇಳಿಕೆ ನೀಡುವುದು ಒಂದು ಶೋಕಿ ಹೋರಾಟವಾಗಿದೆ. ತಕ್ಷಣ ಕೊರಗರ ಬೇಡಿಕೆ ಈಡೇರಿಸದಿದ್ದಲ್ಲಿ ಸರಕಾರದ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸುವುದಾಗಿ ಎಚ್ಚರಿಸಿದರು.

ಈ ವೇಳೆ ಧರಣಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕಾರಿ ಸಮಿತಿ ಸಂಚಾಲಕ ಜೀರಹಳ್ಳಿ ವೆಂಕಟೇಶ ಅವರು ಮಾತನಾಡಿ,  ನಾಳೆಯೇ ರಾಜ್ಯ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪನ ನಿವಾಸಕ್ಕೆ ಬೇಟಿಮಾಡಿ ನಿಮ್ಮ ಪ್ರಾಮಾಣಿಕ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮೈಸೂರು ವಿಭಾಗಿಯ ಸಂಚಾಲಕ ರಾಜಶೇಖರ್ ಕೋಟೆ, ರಾಜ್ಯ ನಾಯಕ ಉಮಾಶಂಕರ್, ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದ್ದೂರು, ಅಂಬೇಡ್ಕರ್ ಯುವಸೇನೆಯ ನಾಯಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!