ಉಡುಪಿ ಜಿಲ್ಲೆಯಾದ್ಯಂತ ಸಿಐಟಿಯು,ಕೂಲಿಕರಾರ ಸಂಘ,ರೈತ ಸಂಘ ಜಂಟಿ ಪ್ರತಿಭಟನೆ ಯಶಸ್ವಿ

ಉಡುಪಿ (ಉಡುಪಿ ಟೈಮ್ಸ್ ವರದಿ): ಕೊರೋನಾ ರೋಗವನ್ನು ತಡೆಗಟ್ಟಬೇಕಾದರೆ ಆದಾಯವಿಲ್ಲದ ದಿನಗೂಲಿ ಕಾರ್ಮಿಕರಿಗೆ ಜೀವನಾಶ್ಯಕ ಅಗತ್ಯ ವಸ್ತುಗಳನ್ನು ಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಡೀ ಸಂಪನ್ಮೂಲಗಳನ್ನು ಬಳಸಿ ಮುಂದಿನ ಮೂರು ತಿಂಗಳವರೆಗೆ ರೂ.10 ಸಾವಿರವನ್ನು ಕಾರ್ಮಿಕರಿಗೆ ಕ್ರಷಿಕೂಲಿಕಾರರ ಖಾತೆಗೆ ಜಮೆ ಮಾಡಬೇಕೆಂದು ಸಿಐಟಿಯು, ಕ.ಪ್ರಾ.ರೈತ ಸಂಘ, ಕ.ಪ್ರಾ.ಕೃಷಿ ಕೂಲಿಕಾರರ ಸಂಘದ ಸದಸ್ಯರು ಜಿಲ್ಲೆಯಾದ್ಯಂತ ಮನೆ ಮನೆಗಳಲ್ಲಿ, ಕಚೇರಿಗಳ ಎದುರು ಕೋವಿಡ್ ನಿಯಮ ಪಾಲಿಸಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ವಾರ್ಷಿಕ ಐದು ಲಕ್ಷಕ್ಕಿಂತಲೂ ಕಡಿಮೆ ಆದಾಯವಿರುವ ಜನಸಂಖ್ಯೆಯನ್ನು ನೋಡಿದರೆ 1.5 ಕೋಟಿ ಕುಟುಂಬಗಳಿವೆ.ಈ ಪರಿಹಾರ ಕೊಡಲು ಒಟ್ಟು ಐದಿನೈದು ಸಾವಿರ ಕೋಟಿಗಳಷ್ಟು ಹಣ ಸಾಕಾಗುತ್ತದೆ.ರಾಜ್ಯದಿಂದ ಪಿಎಂ ಕೇರ್ಸ್ ನಿಧಿಗೆ ನೀಡಲಾಗಿರುವ ಸಾವಿರಾರು ಕೋಟಿಗಳು ಹಾಗೂ ರಾಜ್ಯದ ಸಿಎಸ್ ಆರ್ ಫಂಡ್ ಗಳನ್ನು ಕ್ರೋಡಿಕರಿಸಿದರೆ ಇದು ದೊಡ್ಡ ವೆಚ್ಚವಾಗಲಾರದು.

ಪ್ರತಿಯೊಬ್ಬರಿಗೂ 10 ಕೆಜಿ ಪೌಷ್ಠಿಕಾಂಶ ಆಹಾರಧಾನ್ಯಗಳನ್ನುವಿತರಿಸಬೇಕು.ಪ್ರತಿಯಬ್ಬರಿಗೂ ಸರಕಾರ ಉಚಿತ ಲಸಿಕೆಗಳನ್ನು ನೀಡಬೇಕು.ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲರಿಗೂ ವ್ಯಾಕ್ಸಿನ್, ಆಕ್ಸಿಜನ್ ಕೊರತೆಯಾಗದಂತೆ ಸಮರೋಪಾದಿಯಲ್ಲಿ ಸರಕಾರ ಕೆಲಸ ಮಾಡಬೇಕು. ಕೋವಿಡ್ ನಿಂದ ಮೃತರಾದವರಿಗೆ ಪರಿಹಾರ ಒದಗಿಸಬೇಕು.ಸರಕಾರ ಬೆಲೆ ಏರಿಕೆ ಹೊರೆಯನ್ನು ನಿರುದ್ಯೋಗಿ ಬಡಜನರ ಮೇಲೆ ವಿಧಿಸುತ್ತಿರುವುದನ್ನು ನಿಲ್ಲಿಸಬೇಕು, ಲಾಕ್ ಡೌನ್ ಅವಧಿಯಲ್ಲಿ ರಜೆಗಳನ್ನು ಸಂಬಳ ಸಮೇತ ರಜೆ ಎಂದು ಘೋಷಿಸಬೇಕು, ಅಗತ್ಯ ಔಷಧಿಗಳ ಕಾಳಸಂತೆಯನ್ನು ಕೂಡಲೇ ನಿಲ್ಲಿಸಬೇಕೆಂದು ಸಿಐಟಿ ಯು ಕ್ರಷಿಕೂಲಿಕಾರರಸಂಘ ಪ್ರಾಂತ ರೈತ ಸಂಘಗಳ ನೇತ್ರತ್ವದಲ್ಲಿ ರಾಜ್ಯ ವ್ಯಾಪಿ ಪ್ರತಿಭಟನೆ ಭಾಗವಾಗಿ ಜಿಲ್ಲೆಯಲ್ಲಿ ಮನೆ ಮನೆಗಳಲ್ಲಿ, ಕಛೇರಿಯಲ್ಲಿ ಉಡುಪಿ, ಕಾರ್ಕಳ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾಪು ತಾಲೂಕಿನ ವಿವಿದೆಡೆ ಪ್ರತಿಭಟನೆ ನಡೆಸಲಾಯಿತು.


ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕ ಎಚ್ ನರಸಿಂಹ ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಉಪಾಧ್ಯಕ್ಷ ಬಾಲಕ್ರಷ್ಣ ಶೆಟ್ಟಿ, ಖಜಾಂಚಿ ಶಶಿಧರ ಗೊಲ್ಲ, ಕಾರ್ಯದರ್ಶಿ ಗಳಾದ ಶೇಖರ ಬಂಗೇರ, ಉಮೇಶ್ ಕುಂದರ್, ಬಾರತಿ, ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಕ್ರಷಿಕೂಲಿಕಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ವಿವಿದೆಡೆ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!