ಕಾಪು: ಪುರಸಭೆ ಸದಸ್ಯರಾಗಿ ಐವರ ನಾಮ ನಿರ್ದೇಶನ
ಕಾಪು ಜು.27(ಉಡುಪಿ ಟೈಮ್ಸ್ ವರದಿ): ಕಾಪು ಪುರಸಭೆಗೆ ಸದಸ್ಯರಾಗಿ ಐದು ಮಂದಿಯನ್ನು ನಾಮನಿರ್ದೇಶನಗೊಳಿಸಿ ಸರಕಾರ ಆದೇಶ ನೀಡಿದೆ.
ಕಾಪುವಿನ ಉಳಿಯಾರಗೋಳಿಯ ಅಮೀರ್ ಮೊಹಮ್ಮದ್, ಜ್ಯೂಲಿಯಟ್ ರೇಷ್ಮಾ, ಪಡು ಗ್ರಾಮದ ದೇವರಾಜ್ ಎ ಕೋಟ್ಯಾನ್, ಬಾಬಣ್ಣ ನಾಯಕ್, ಮಲ್ಲಾರು ಗುತ್ತುವಿನ ಶಾಂತಲತಾ ಎಸ್. ಶೆಟ್ಟಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಡುಪಿ ಜಿಲ್ಲೆಯ ಕಾಪು ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿದೆ.