ಲಯನ್ಸ್ ಜಿಲ್ಲೆ 317C ರ ಬಿರುದು ಪ್ರಧಾನ ಕಾರ್ಯಕ್ರಮ
ಉಡುಪಿ ಜು.27( ಉಡುಪಿ ಟೈಮ್ಸ್ ವರದಿ): ಲಯನ್ಸ್ ಜಿಲ್ಲೆ 317C ರ ಬಿರುದು ಪ್ರಧಾನ ಕಾರ್ಯಕ್ರಮವು ಉಡುಪಿಯ ಅಂಬಾಗಿಲುವಿನ ಅಮೃತ ಗಾರ್ಡನ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಲ್ಟಿಪಲ್ ಕೌನ್ಸಿಲ್ 317 ರ ಮಾಜಿ ಅಧ್ಯಕ್ಷರಾದ ಲಯನ್ ಡಾ. ನಾಗರಾಜ್ ಬಾಯರಿಯವರು ಮಾತನಾಡಿ 2023-24 ನೇ ವರ್ಷ ಬಹಳ ಉತ್ತಮವಾಗಿ ನಡೆಸಿ ನೂರಾರು ಸೇವಾ ಕಾರ್ಯಕ್ರಮಗಳನ್ನು ಮಾಡಿ ಜನರ ಪ್ರಶಂಸೆಗೆ ಪಾತ್ರರಾದ ಡಾ|ನೇರಿ ಕಾರ್ನಲಿಯೊ ರವರಿಗೆ ಅಭಿನಂದಿಸಿದರು. ಈ ವರ್ಷ 4 ಹೊಸ ಲಯನ್ಸ್ ಕ್ಲಬ್‌ಗಳನ್ನು 37 ಎಂ. ಜೆ, ಫ್, ಪಿಎಂ ಜೆ ಫ್ ಗಳನ್ನು ಹಾಗೂ 500 ಕ್ಕೂ ಮಿಕ್ಕಿ ಹೊಸ ಸದಸ್ಯರ ಸೇರ್ಪಡೆ ಆಗಿದ್ದು ಪ್ರಶಂಸಾರ್ಹ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಡಾ. ನೇರಿ ಕಾರ್ನೆಲಿಯೊರವರಿಗೆ ಎಲ್ಲರ ಪರವಾಗಿ ಸನ್ಮಾನಿಸಿದರು. ಹಾಗೂ ಲಯನ್ಸ್ ಜಿಲ್ಲೆ 317C ಯು 4 ಕಂದಾಯ ಜಿಲ್ಲೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಉಡುಪಿಗಳನ್ನೊಳಗೊಂಡಿದ್ದು ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಲಯನ್ಸ್ ಸದಸ್ಯರು ಹಾಜರಿದ್ದರು. ವಿವಿಧ ಹುದ್ದೆಗಳನ್ನು ಸ್ವೀಕರಿಸಿ ಅತ್ಯುತ್ತಮ ಸೇವೆ ಮಾಡಿದ ಸುಮಾರು 650 ಲಯನ್ಸ್ ಸದಸ್ಯರಿಗೆ ಹಾಗೂ 100 ಕ್ಲಬ್‌ಗಳಿಗೆ ಸನ್ಮಾನಿಸಿ ಬಿರುದು ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಗವರ್ನರ್ ವಕೀಲರಾದ ಲಯನ್ ಎ. ಎಂ. ಮುನಿಯಪ್ಪ, ಜಿಲ್ಲೆಯ ಎಲ್ಲಾ ಮಾಜಿ ಗವರ್ನರ್ ಗಳಾದ ಡಾ. ರವೀಂದ್ರನಾಥ್ ಶೆಟ್ಟಿ, ಡಾ. ತಲ್ಲೂರ್ ಶಿವರಾಮ್ ಶೆಟ್ಟಿ, ಲಯನ್ ಶ್ರೀಧರ್ ಶೇಣವ ಲಯನ್ ಎನ್. ಎಮ್. ಹೆಗ್ಡೆ, ಲಯನ್ ಸುರೇಶ್ ಶೆಟ್ಟಿ, ಲಯನ್ ಪ್ರಕಾಶ್ T ಸೋನ್ಸ್, ಲಯನ್ ಜಯಕರ್ ಶೆಟ್ಟಿ ಇಂದ್ರಾಳಿ, ಲಯನ್ ಎಚ್. ಎಸ್. ಮಂಜಪ್ಪ, ಪ್ರಥಮ ಜಿಲ್ಲಾ ಗವರ್ನರ್ ಲಯನ್ ಸ್ವಪ್ನ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ರವಿರಾಜ ನಾಯಕ್, ಜಿಲ್ಲಾ ಖಜಾಂಚಿ ಲಯನ್ ರಿಚರ್ಡ್ ಡಯಾಸ್, ಜಿಲ್ಲಾ ಸಂಪುಟ ಪಿ. ಆರ್. ಓ ಲಯನ್ ಸಿದ್ದರಾಜು, ಕಾರ್ಯಕ್ರಮದ ಗೌರವಾಧ್ಯಕ್ಷ ರಾದ ಲಯನ್ ಅರುಣ್ ಕುಮಾರ್ ಹೆಗ್ಡೆ, ವಿವಿಧ LCIF ಮುಖ್ಯಾಧಿಕಾರಿ ಲಯನ್ ಹರಿಪ್ರಸಾದ್ ರೈ ಮುಂತಾದವರು ಹಾಜರಿದ್ದರು.