ಸಿಐಟಿಎಜಿ ಸಂಸ್ಥೆಯ ವ್ಯವಸ್ಥಾಪಕ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಉದ್ಯಮಿ ಭೀಮ್ ರಾಜೇಶ್ ಆಯ್ಕೆ
ಉಡುಪಿ ಜು.24(ಉಡುಪಿ ಟೈಮ್ಸ್ ವರದಿ): ಸಿಐಟಿಎಜಿ ಸಂಸ್ಥೆಯ ವ್ಯವಸ್ಥಾಪಕ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಬೆಂಗಳೂರಿನ ಪ್ರಸಿದ್ದ ಉದ್ಯಮಿ ಭೀಮ್ ರಾಜೇಶ್ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಪ್ರಸಿದ್ದ ಕೈಗಾರಿಕೋದ್ಯಮಿ ಶರವಣನ್, ಕಾರ್ಯದರ್ಶಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪ್ರಸಿದ್ದ ಮಾಹಿತಿ ತಂತ್ರಜ್ಞಾನ ಎಂಜಿನಿಯರ್ ಹಾಗೂ ಪರಣಿತರುಗಳಾದ ಬೆಂಗಳೂರಿನ ಗಾಯತ್ರಿ ಗೋಪಾಲಕೃಷ್ಣನ್ ಮತ್ತು ಉಡುಪಿಯ ದೀಪಕ್ ಶೆಣೈ (ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಂದ ಏಕೈಕ ಆಯ್ಕೆ) ಮತ್ತು ಕೋಶಾಧಿಕಾರಿಯಾಗಿ ಪ್ರಸಿದ್ದ ಲೈಫ್ ಕೋಚ್ ಬೆಂಗಳೂರಿನ ಕೀರ್ತಿ ಠಾಕೂರೀಯ, ಕಮಿಟಿ ಸದಸ್ಯರಾಗಿ ಸಮಾಜದ ಗಣ್ಯ ಹುದ್ದೆಯಲ್ಲಿರುವ ಪ್ರಖ್ಯಾತ ವೃತಿಪರರುಗಳಾದ ಸಂಗೀತ್ ಕುಮಾರ್, ವಿಕ್ರಮ್ ಶೆಟ್ಟಿ, ರಾಕೇಶ್ ಗೌಡ, ರವಿಕುಮಾರ್, ಏಸು ಡೇವಿಸ್, ವಿನ್ಸೆಂಟ್ ಪಿಂಟೋ ಅವರು ಅಧಿಕಾರ ವಹಿಸಿಕೊಂಡಿದ್ದಾರೆಂದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.