ಪ್ರೇಯಸಿಯನ್ನೇ ಕೊಂದು ಹೂತಿಟ್ಟ ಪ್ರಿಯಕರ! ಸಿಕ್ಕಿ ಬಿದ್ದದ್ದು ಹೇಗೆ?
ಚಿಕ್ಕಮಗಳೂರು ಜು.24 : ಮದುವೆಯಾಗುತ್ತೇನೆ ಎಂದು ನಂಬಿಸಿದ ಪ್ರಿಯಕರನೋರ್ವ ತನ್ನ ಪ್ರೇಯಸಿಯನ್ನೇ ಕೊಂದು ಹೂತಿಟ್ಟಿದ್ದ ಆಘಾತಕಾರಿ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದ ಸೌಮ್ಯ ಹತ್ಯೆಯಾದ ಯುವತಿ. ಕೊಪ್ಪದ ಸೃಜನ್ ಯುವತಿಯನ್ನು ಕೊಲೆಗೈದ ಆರೋಪಿ.
ಪ್ರಕರಣ ಹಿನ್ನೆಲೆ:
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದ ಸೌಮ್ಯಳನ್ನು ಕೊಪ್ಪದ ಭರತ್ ಫೈನಾನ್ಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಾಳಗುಪ್ಪ ಮೂಲದ ಸೃಜನ್ ಪ್ರೀತಿಸಿ ಮದುವೆಯಾಗುತ್ತೇನೆಂದು ಹೇಳಿದ್ದ. ಆದರೆ ತಾನು ಪ್ರೀತಿಸಿದ ಸೌಮ್ಯ ದಲಿತ ಜನಾಂಗಕ್ಕೆ ಸೇರಿದವಳು ಎಂದು ತಿಳಿದು ನಿರಾಕರಿಸಿದ್ದ. ಈ ವಿಚಾರವಾಗಿ ಕಳೆದ ಒಂದು ವರ್ಷದ ಹಿಂದೆ ಸೌಮ್ಯ ಆತ್ಮಹತ್ಯೆಗೆ ಯತ್ನಿಸಿದಳು. ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯ ಪೊಲೀಸರು ಸೃಜನ್ ಅನ್ನು ಕರೆಸಿ ಸೌಮ್ಯಳ ಪ್ರೀತಿಯ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಸೃಜನ್ ಆರು ತಿಂಗಳು ಬಿಟ್ಟು ಮದುವೆಯಾಗುತ್ತೇನೆಂದು ಪೊಲೀಸ್ ಠಾಣೆಯಲ್ಲಿ ತಿಳಿದ್ದಾನೆ.
ಈ ನಡುವೆ ನರ್ಸಿಂಗ್ ಕಲಿಯುತ್ತಿದ್ದ ಸೌಮ್ಯ ಜುಲೈ 2ರಂದು ಕಾಣೆಯಾಗಿದ್ದಳು. ಇತ್ತ ಮನೆಯವರು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನುಮಾನಗೊಂಡ ಪೊಲೀಸರು ಸೃಜನನ್ನು ವಿಚಾರಣೆ ನಡೆಸಿದಾಗ ಸಾಗರ ದಿಂದ ಆಕೆಯನ್ನು ಬಸ್ಸಿನಲ್ಲಿ ಕಳಿಸಿರುವುದಾಗಿ ಸೃಜನ್ ತಿಳಿಸಿದ್ದ.
ಆದರೆ ಯುವತಿಯ ಮೊಬೈಲ್ ರಿಪ್ಪನ್ ಪೇಟೆಯ ಸಮೀಪ ಹೆದ್ದಾರಿಪುರದಲ್ಲಿ ಲೊಕೇಶನ್ ಪತ್ತೆಯಾಗಿದ್ದು. ಸೃಜನ್ ಸೌಮ್ಯಳನ್ನು ಅಲ್ಲಿ ಕೊಲೆ ಮಾಡಿ. ದೇಹವನ್ನು ಆನಂದಪುರ ಸಮೀಪದ ಮುಂಬಾಳು ರೈಲ್ವೆ ಗೇಟ್ ನ ಪಕ್ಕದಲ್ಲಿ ಮದ್ಲೆಸರ ಗ್ರಾಮದ ರಸ್ತೆಯ ಪಕ್ಕದಲ್ಲಿ ನೀರಿನ ಪೈಪ್ ಅಳವಡಿಕೆಗೆ ತೆಗೆದಿರುವ ಗುಂಡಿಯಲ್ಲಿ ಹೂತು ಹಾಕಿರುವುದಾಗಿ ತಿಳಿದು ಬಂದಿದೆ.
ಇದೀಗ ಮನೆ ಮಗಳನ್ನು ಕಳೆದುಕೊಂಡಿರುವ ಸೌಮ್ಯ ಕುಟುಂಬದವರು ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.