ಉಡುಪಿ:ಜು.28-ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ ಜು.24(ಉಡುಪಿ ಟೈಮ್ಸ್ ವರದಿ): ನೆಹರೂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಲೆವೂರು, ಹೃದಯಮ್ ಫೌಂಡೇಷನ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಮಣಿಪಾಲದ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ನುರಿತ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜು. 28 ರಂದು ಬೆಳಿಗ್ಗೆ 9 ಗಂಟೆಗೆ ಅಲೆವೂರಿನ ಸಿಎ ಬ್ಯಾಂಕ್‌ನ ಸಮೃದ್ಧಿ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಇಸಿಜಿ , ರಕ್ತದೊತ್ತಡ, ಮಧುಮೇಹ, ರಕ್ತದ ಹಿಮೋಗ್ಲೋಬಿನ್, ಸ್ತನ ಹಾಗೂ ಗರ್ಭಕೋಶದ ತಪಾಸಣೆ, ಚರ್ಮವ್ಯಾದಿ ತಪಾಸಣೆಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!