ಜು.20-“ಉಡುಪಿ ಪ್ರವಾಸೋದ್ಯಮ : ನಿನ್ನೆ, ಇಂದು ಮತ್ತು ನಾಳೆ” ವಿಚಾರ ಗೋ಼ಷ್ಠಿ
ಉಡುಪಿ. ಜು.17(ಉಡುಪಿ ಟೈಮ್ಸ್ ವರದಿ) : ಉಡುಪಿ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ನೇತೃತ್ವದಲ್ಲಿ ಪ್ರವಾಸೋದ್ಯಮದ ಕುರಿತು “ಉಡುಪಿ ಪ್ರವಾಸೋದ್ಯಮ : ನಿನ್ನೆ, ಇಂದು ಮತ್ತು ನಾಳೆ” ಎಂಬ ವಿಚಾರ ಗೋಷ್ಠಿ ಜು.20 ರಂದು ಉಡುಪಿಯ ಹೋಟೆಲ್ ಕಿದಿಯೂರು ಹೋಟೆಲ್‌ನ ಮಾಧವಕೃಷ್ಣ ಸಭಾಭವನದಲ್ಲಿ ನಡೆಯಲಿದೆ ಎಂದು ಚೇಂಬರ್‌ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ವಿಚಾರಗೋಷ್ಟಿ ಬೆಳಿಗ್ಗೆ 10 ರಿಂದ ಅಪರಾಹ್ನ ಗಂಟೆ 1 ರತನಕ ನಡೆಯಲಿದೆ. ವಿಚಾರಗೋಷ್ಟಿಯಲ್ಲಿ ಉಡುಪಿ ಪ್ರವಾಸೋದ್ಯಮದ ಪ್ರಸ್ತುತ ಪರಿಸ್ಥಿತಿ, ಅವಕಾಶಗಳು, ಸಮಸ್ಯೆಗಳು, ನಿರೀಕ್ಷೆಗಳು ಹಾಗೂ ಬೆಳವಣಿಗೆ ಕುರಿತು ಪ್ರವಾಸೋದ್ಯಮದ ಪಾಲುದಾರರು, ಸಂಘಟಕರು,ಅನುಭವಿಗಳು ಅವರ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಸಮಾರಂಭವನ್ನು ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ರವರು ಭಾಗವಹಿಸಲಿದ್ದಾರೆ ಎಂದರು
ಈ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ|| ಕೆ.ವಿದ್ಯಾ ಕುಮಾರಿ, ಮಾಜಿ ಶಾಸಕ ಹಾಗೂ ಜಿಲ್ಲಾ ಆಟೋ ಮತ್ತು ಟ್ಯಾಕ್ಸಿ ಎಸೋಸಿಯೇಷನ್‌ನ ಗೌರವ ಅಧ್ಯಕ್ಷರಾದ ಕೆ ರಘುಪತಿ ಭಟ್, ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ-ಮನೋಹರ್ ಎಸ್.ಶೆಟ್ಟಿ, ಮಣಿಪಾಲ ಆಸ್ಪತ್ರೆಯ ಶಲ್ಯ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಆಚರ‍್ಯ, ಜಿಲ್ಲಾ ಅಟೋಮೋಬೈಲ್ ಎಸೊಸಿಯೇಷನ್ ಪ್ರತಿನಿದಿ- ಪ್ರಸಾದ್ ರಾಜ್ ಕಾಂಚನ್, ಉಡುಪಿ ಟೂರಿಸಂ ಸಹಾಯಕ ನಿರ್ದೇಶಕ – ಕುಮಾರ್ ಸಿ.ಯು. ಮತ್ತು ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮಂಡಿಸಿ ಜಿಲ್ಲೆಯ ಪ್ರವಾಸೋದ್ಯಮದ ಅರ್ಹ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ನೀಡುವ ಕುರಿತು ಮಾಹಿತಿ ನೀಡುವರು ಎಂದು ತಿಳಿಸಿದರು.
ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪ್ರತಿನಿಧಿಗಳು ತಮ್ಮ ಅನಿಸಿಕೆ, ಅವಹಾಲುಗಳನ್ನು ಈ ಸಂದರ್ಭದಲ್ಲಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಟೂರ‍್ಸ್ & ಟ್ರಾವೆಲ್ಸ್ ಸಂಘಟನೆಯ ಅಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್, ಚೇಂಬರ್‌ನ ಉಪಾಧ್ಯಕ್ಷ ಕೆ.ನಟರಾಜ್ ಪ್ರಭು, ನಿರ್ದೇಶಕರಾದ ಡಾ|| ವಿಜಯೇಂದ್ರ ಮತ್ತು ವಾಲ್ಟರ್ ಸಲ್ಡಾನ್ಹಾ ಉಪಸ್ಥಿತರಿದ್ದರು.