ಚಿಕ್ಕಮಗಳೂರು: ಅನಗತ್ಯವಾಗಿ ತಿರುಗಾಡಿದರೆ ಕ್ವಾರಂಟೈನ್ ಗ್ಯಾರಂಟಿ, ಪುರಸಭೆ ಅಧಿಕಾರಿಗಳಿಂದ ವಿನೂತನ ಪ್ರಯೋಗ
ಚಿಕ್ಕಮಗಳೂರು: ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿ ಇರುವುದರಿಂದ ಸಾರ್ವಜನಿಕವಾಗಿ ಅನಗತ್ಯವಾಗಿ ತಿರುಗಾಡುತ್ತಿರುವವರನ್ನು ನಿಯಂತ್ರಿಸುವ ನಿಟ್ಟಿ ನಲ್ಲಿ ಪೊಲೀಸರು ತಪಾಸಣೆಗೆ ಮುಂದಾಗಿರುರೋದ, ಹೀಗೆ ಅನಗತ್ಯವಾಗಿ ತಿರುಗಾಡುವವರಿಗೆ ಕಡಿವಾಣ ಹಾಕಲು ಅವರಿಗೆ ದಂಡ ವಿಧಿಸುವುದು ಗೊತ್ತಿರೊ ವಿಚಾರಾನೇ ಆದರೆ ಇಲ್ಲಿ ಮಾತ್ರ ಅನಗತ್ಯವಾಗಿ ತಿರುಗಾಡಿದರೆ ಕ್ವಾರಂಟೈನ್ ಶಿಕ್ಷೆ ನೀಡಲಾಗುತ್ತದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ತರೀಕೆರೆ ಪುರಸಭೆ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೇಕಾಬಿಟ್ಟಿ ರಸ್ತೆಗಿಳಿಯುವವರನ್ನು ಹಿಡಿದು ಕ್ವಾರಂಟೈನ್‍ಗೆ ಒಳಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಜನರ ಅನಗತ್ಯ ಸಂಚಾರವನ್ನು ನಿಯಂತ್ರಿಸಲು ತರೀಕೆರೆ ಪಟ್ಟಣದಲ್ಲಿ ಖಡಕ್ ರೂಲ್ಸ್ ಜಾರಿ ಮಾಡಿದ್ದು, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ನೇತೃತ್ವದಲ್ಲಿ ಸುಖಾಸುಮ್ಮನೆ ರಸ್ತೆಗೆ ಬರುವವರನ್ನು ಮತ್ತು ಹೆಚ್ಚು ಓಡಾಟ ಮಾಡಿದವರನ್ನು ಹಿಡಿದು ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸುವ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಪಿಪಿಇ ಕಿಟ್ ಧರಿಸಿಕೊಂಡು ಜನರನ್ನು ಹಿಡಿಯಲು ಪುರಸಭೆ ಸಿಬ್ಬಂದಿ ಸಜ್ಜಾಗಿದ್ದು, ಅಂಬುಲೆನ್ಸ್, ಪಿಪಿಇ ಕಿಟ್ ಧರಿಸಿರೋ ಸಿಬ್ಬಂದಿ ನೋಡಿ ಜನರು ಪರಾರಿಯಾಗುತ್ತಿದ್ದಾರೆ.