ಪಡುಬಿದ್ರೆ: ಕಾಡಿಪಟ್ನ ನಡಿಪಟ್ಣ ವಿದ್ಯಾ ಪ್ರಚಾರಕ ಸಂಘದ ಅಮೃತ ಮಹೋತ್ಸವ
ಪಡುಬಿದ್ರೆ ಜು 14(ಉಡುಪಿ ಟೈಮ್ಸ್ ವರದಿ): ಕಾಡಿಪಟ್ನ ನಡಿಪಟ್ಣ ವಿದ್ಯಾ ಪ್ರಚಾರಕ ಸಂಘದ ಅಮೃತ ಮಹೋತ್ಸವ ಹಾಗೂ ಇದರ ಆಡಳಿತದ ಸಾಗರ ವಿದ್ಯಾ ಮಂದಿರ ಶಾಲೆಯ ಬೆಳ್ಳಿ ಹಬ್ಬದ ಸ್ಮಾರಕ ಕಟ್ಟಡದ ಶಿಲನ್ಯಾಸ ಮತ್ತು ಭೂಮಿ ಪೂಜೆಯು ಇಂದು ಬೆಳಿಗ್ಗೆ ಕೆಎನ್ವಿಪಿ ಸಂಘದ ಅಧ್ಯಕ್ಷ ಸುಕುಮಾರ್ ಸಿ ಶ್ರೀಯಾನ್ ಅವರ ಮುಂದಾಳತ್ವದಲ್ಲಿ ನಡೆಯಿತು.
ಶಿಲಾನ್ಯಾಸ ಕಾರ್ಯಕ್ರಮವನ್ನು ಉಡುಪಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ ಶಂಕರ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಜಿ ಮೆಂಡನ್, ವಿನಯ್ ಕುಮಾರ್ ಸೊರಕೆ, ಉಚ್ಚಿಲ ದಕ್ಷಿಣ ಕನ್ನಡ ಮೊಗವೀರ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ರತ್ನಾಕರ್ ರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಪಡುಬಿದ್ರಿ, ಅರುಣ ಇಂಡಸ್ಟ್ರೀಸ್ ಮಂಗಳೂರು ಅದರ ಮ್ಯಾನೇಜಿಂಗ್ ಪಾರ್ಟ್ನರ್ ಬೀಡು ಶ್ರೀ ಅನಂತೇಶ ವಿ ಪ್ರಭು, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ ಶೆಟ್ಟಿ, ಸಿಎ ಬ್ಯಾಂಕ್ ಪಡುಬಿದ್ರಿ ಅಧ್ಯಕ್ಷ ವೈ ಸುಧೀರ್ ಕುಮಾರ್, ಉಡುಪಿ ವಿದ್ಯುತ್ ಗುತ್ತಿಗೆದಾರರಾದ ಶ್ರೀಪತಿ ಭಟ್, ಉಡುಪಿ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆ ಬೆಟ್ಟು, ಅಮೃತ ಮತ್ತು ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಸಾಗರ ವಿದ್ಯಾ ಮಂದಿರ ಪಡುಬಿದ್ರಿ ಇದರ ಮುಖ್ಯ ಶಿಕ್ಷಕಿ ಪದ್ಮಶ್ರೀ ಸುರೇಶ್ ರಾವ್, ಕೆ.ಎನ್.ವಿ.ಪಿ ಸಂಘದ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಾದ ಶ್ರೀಯುತ ಸುಕುಮಾರ್ ಸಿ ಶ್ರೀಯಾನ್, ಕೆಎನ್‌ವಿಪಿ ಸಂಘದ ಉಪಾಧ್ಯಕ್ಷ ನಾರಾಯಣ ಕರ್ಕೇರ, ಕಾರ್ಯದರ್ಶಿ ಹರೀಶ್ ಪುತ್ರನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪವಿತ್ರ ಗಿರೀಶ್, ನಡಿ ಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷ ಗಂಗಾಧರ್ ಕರ್ಕೆರ, ಕಾಡಿಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ಕಾಡಿಪಟ್ಣ ಮಹಿಳಾ ಮೊಗವೀರ ಸಭಾದ ಅಧ್ಯಕ್ಷ ವಿಜಯ ಮೆಂಡನ್, ನಡಿಪಟ್ಣ ಮಹಿಳಾ ಮೊಗವೀರ ಸಭಾದ ಅಧ್ಯಕ್ಷೆ ಮಲ್ಲಿಕಾ ದಿನಕರ್, ಅಮೃತ ಮತ್ತು ರಜತ ಮಹೋತ್ಸವ ಸಮಿತಿಯ ಧನ ಸಂಗ್ರಹಣ ಸಮಿತಿಯ ಚೆಯರ್ಮೆನ್ ಹರಿಪ್ರಸಾದ್ ಎಚ್, ಅಮೃತ ಮತ್ತು ರಜತ ಮಹೋತ್ಸವದ ಸ್ಮರಣ ಸಂಚಿಕೆ ಸಮಿತಿಯ ಚೆಯರ್ಮೆನ್ ಪ್ರಶಾಂತ್ ಕಾಂಚನ್, ಕಟ್ಟಡ ಗುತ್ತಿಗೆದಾರರಾದ ಪವನ್ ಕುಮಾರ್, ಕಟ್ಟಡ ವಿನ್ಯಾಸಕರಾದ ಅರುಣ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯನಿ ಪದ್ಮಶ್ರೀ ಸುರೇಶ್, ಶಾಲಾ ಶಿಕ್ಷಕಿ ವಿನುತಾ ಶೆಟ್ಟಿ ಉಪಸ್ಥಿತರಿದ್ದರು.