ಉಡುಪಿ: ಪ್ರಿಯದರ್ಶಿನಿ ಪಿ.ರವರ ‘ಕೀಕಾ’ ಕೃತಿ ಲೋಕಾರ್ಪಣೆ

ಉಡುಪಿ ಜು.12(ಉಡುಪಿ ಟೈಮ್ಸ್ ವರದಿ) : ಸಾಫ್ಟ್‌ವೇರ್ ಇಂಜಿನಿಯರ್ ಪ್ರಿಯದರ್ಶಿನಿ ಪಿ. ಬರೆದ ‘ಕೀಕಾ’ ಕೃತಿ ಲೋಕಾರ್ಪಣೆ ಸಮಾರಂಭವು ಉಡುಪಿಯ ಅಜ್ಜರಕಾಡು ಪುರ ಭವನದಲ್ಲಿ ಇಂದು ಜರಗಿತು.

ಕಾರ್ಯಕ್ರಮವನ್ನು ಹಾಸ್ಯ ಕವಿ, ಲೇಖಕ ಶಾಂತರಾಜ ಐತಾಳ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಹಿಮಾಲಯ ಕೂಡ ಮಲೀನಗೊಳ್ಳುತ್ತಿದೆ. ಮುಂದೆ ಬೀಚ್‌ಗಳಿಗೆ ಬೇಲಿ ಅಳವಡಿಸಿದಂತೆ ಹಿಮಾಲಯಕ್ಕೂ ಬೇಲಿ ಅಳವಡಿಸುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಹಿಮಾಲಯವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದೇ ರೀತಿ ಬಹುತೇಕ ಪಕ್ಷಿಗಳು ವಿಶಾನ ದಂಚಿಗೆ ತಲುಪುತ್ತಿವೆ. ಈ ಎಲ್ಲ ಮಾಹಿತಿಗಳನ್ನು ಈ ಪುಸ್ತಕದಲ್ಲಿ ಲೇಖಕಿ ನೀಡಿದ್ದಾರೆ. ಪುಸ್ತಕವನ್ನು ಕೊಂಡು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು

ಈ ವೇಳೆ ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಉದ್ಯಮಿ ಪುರುಷೋತ್ತಮ ಶೆಟ್ಟಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್ ಶೆಟ್ಟಿ, ಉಡುಪಿ ಜಿ.ಶಂಕರ್ ಸರಕಾರಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಂದ್ರ, ಲೇಖಕಿ ಪ್ರಿಯದರ್ಶಿನಿ, ಶರಣ್ಣಮ್ಮ ಪಿ., ಯೋಗೀಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!