ಯಕ್ಷಗಾನ ಕಲಾವಿದ ನಂದಕುಮಾರ ಪಾಣಾರ ಇವರಿಗೆ ನಿರ್ಮಿಸಿದ “ಲಲಿತಾ ಸದನ” ಉದ್ಘಾಟನೆ

ಕುಂದಾಪುರ: ಜು.8(ಉಡುಪಿ ಟೈಮ್ಸ್):  ಆರ್ಥಿಕವಾಗಿ ದುರ್ಬಲರಾದ ಕಲಾವಿದರು, ವಿದ್ಯಾರ್ಥಿಗಳು ಮತ್ತು ಮತ್ತು ದಾನಿಗಳ ನಡುವೆ ವಿಶ್ವಾಸಾರ್ಹ ಸಂಪರ್ಕ ಸೇತುವಾಗಿ ಉಡುಪಿಯ ಯಕ್ಷಗಾನ ಕಲಾರಂಗದ ಸೇವೆ ಅನನ್ಯವಾದುದು‌ ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಕುಂದಾಪುರದ ಬಿದ್ಕಲ್ಕಟ್ಟೆಯಲ್ಲಿ ಸೌಕೂರು ಮೇಳದ ಯಕ್ಷಗಾನ ಕಲಾವಿದ ನಂದಕುಮಾರ ಪಾಣಾರ ಇವರಿಗೆ ನಿರ್ಮಿಸಿದ “ಲಲಿತಾ ಸದನ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಳಿದ ಸಂಘಟನೆಗಳಿಗೆ ಮಾದರಿಯಾಗುವಂತೆ ಸಮಾಜಮುಖಿಯಾಗಿ 50 ವರ್ಷಗಳನ್ನು ಉತ್ತರಿಸಿದ್ದು, ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ವಹಿಸಿದ್ದರು. ಇದು ಖ್ಯಾತ ಲೆಕ್ಕಪರಿಶೋಧಕರಾದ, ಕುಂದಾಪುರ ಆಚಾರ್ಯ ಕುಟುಂಬದ ಶ್ರೀ ವಸಂತ ಆಚಾರ್ಯ ಮತ್ತು ಶೋಭಾ ವಿ. ಆಚಾರ್ಯ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ, ಸಂಸ್ಥೆಯ 54ನೇ  ಮನೆಯಾಗಿದೆ. 

ಈ ಸಂದರ್ಭದಲ್ಲಿ  ಆಚಾರ್ಯ ಕುಟುಂಬದ ಸಹೋದರರಾದ ಗಣೇಶ ಆಚಾರ್ಯ, ಸುರೇಶ ಆಚಾರ್ಯ, ದಿನೇಶ್ ಆಚಾರ್ಯ ಹಾಗೂ ವಸಂತ ಆಚಾರ್ಯರ ಪುತ್ರ ಸಿದ್ದಾರ್ಥ ಆಚಾರ್ಯ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಎಚ್. ಎಸ್. ಶೆಟ್ಟಿ, ಸೌಕೂರು ಮೇಳದ ಯಜಮಾನರೂ ಸಂಸ್ಥೆಯ ಉಪಾಧ್ಯಕ್ಷರೂ ಆದ ಪಿ. ಕಿಶನ್ ಹೆಗ್ಡೆ  ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ದಾನಿಗಳಾದ ಯು. ವಿಶ್ವನಾಥ ಶೆಣೈ, ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ಮಂಡಳ್ಳಿ, ಸಂಸ್ಥೆಯ ಸದಸ್ಯರಾದ ಎಚ್. ಎನ್. ಶೃಂಗೇಶ್ವರ, ವಿಜಯಕುಮಾರ್ ಮುದ್ರಾಡಿ, ಬಿ. ಭುವನ ಪ್ರಸಾದ್ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಅಶೋಕ ಎಂ., ಹೆಚ್.ಎನ್. ವೆಂಕಟೇಶ್, ಅನಂತರಾಜ ಉಪಾಧ್ಯಾಯ, ಗಣೇಶ್ ಬ್ರಹ್ಮಾವರ, ಡಾ. ರಾಜೇಶ್ ನಾವುಡ, ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!