ಲಯನ್ಸ್ ಕ್ಲಬ್ ಉಡುಪಿ: ಪದಪ್ರಧಾನ ಸಮಾರಂಭ
ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಉಡುಪಿ ಟೌನ್ ಹಾಲ್ ನಲ್ಲಿ ನಡೆಯಿತು.
ನೂತನ ಅಧ್ಯಕ್ಷ ಲೂಯಿಸ್ ಲೋಬೊ ಹಾಗೂ ಅವರ ತಂಡಕ್ಕೆ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಮಾಜಿ ಚೆಯರ್ ಮ್ಯಾನ್ ಹಾಗೂ 317 ಡಿಯ ಮಾಜಿ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಮೂವರು ಸದಸ್ಯರನ್ನು ಹೊಸ ಸದಸ್ಯರನ್ನು ಲಯನ್ಸ್ ಕ್ಲಬ್ ಉಡುಪಿಗೆ ಸೇರ್ಪಡೆಗೊಳಿಸಲಾಯಿತು. ಲಯನ್ಸ್ ಸೇವಾ ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರಿಕ ರೋರ್ವರಿಗೆ ವೀಲ್ ಚೇರ್, ಕ್ಯಾನ್ಸರ್ ಪೀಡಿತ ರೋರ್ವರಿಗೆ ಚಿಕಿತ್ಸೆಗೆ ಆರ್ಥಿಕ ನೆರವು, ಕಿದಿಯೂರು ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸರಕಾರಿ ಶಾಲಾ ಬಾಲಕನಿಗೆ ಸೈಕಲ್ ಖರೀದಿಗೆ ಆರ್ಥಿಕ ನೆರವು ಹಾಗೂ ಅನಾರೋಗ್ಯ ಪೀಡಿತ ವ್ಯಕ್ತಿಯೋರ್ವರ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ನೀಡಲಾಯಿತು.
ಒಟ್ಟು 7 ಶಾಲಾ SSLC ಟಾಪರ್ಸ್ ಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಗವರ್ನರ್ ಡಾ. ಎ. ರವೀಂದ್ರನಾಥ ಶೆಟ್ಟಿ ಅವರು ವಸಂತ ಕುಮಾರ್ ಶೆಟ್ಟಿ- ಡಾ. ದಿವ್ಯಾ ವಿ. ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿದರು.
ಲಯನ್ಸ್ ಕ್ಲಬ್ ಉಡುಪಿಯ ಸೇವಾ ಯೋಜನೆಗಳ ಸಹಾಯಾರ್ಥ ಡಾ. ರೋಷನ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಗಿದ್ದು, ರೂ. 1 ಲಕ್ಷವನ್ನು ಈ ಸಂದರ್ಭ ಸಂಗ್ರಹಿಸಲಾಯಿತು.
ಮಾಜಿ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೇಲಿಯೋ, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಶ್ರೀನಿವಾಸ ಪೈ, ಪ್ರಾಂಥ್ಯ 3ರ ಪ್ರಾಂಥ್ಯಾಧ್ಯಕ್ಷ ಮೆಲ್ವಿನ್ ಅರಾಹ್ನ, ವಲಯ 3ರ ವಲಯಾಧ್ಯಕ್ಷೆ ಪ್ರಮೀಳಾ ಲಸ್ರಾಡೊ, ನೂತನ ಕೋಶಾಧಿಕಾರಿ ಲೆಸ್ಲಿ ಅರವಿಂದ್ ಕರ್ನೇಲಿಯೊ, ನಿರ್ಗಮನ ಲಿಯೋ ಕಾರ್ಯದರ್ಶಿ ಅದಿತಿ ಕಿಣಿ, ನೂತನ ಲಿಯೊ ಅಧ್ಯಕ್ಷ ಲೆನನ್ ಕರ್ನೇಲಿಯೊ, ಲಿಯೊ ಕಾರ್ಯದರ್ಶಿ ಅವನಿ ಕಿಣಿ, ಕೋಶಾಧಿಕಾರಿ ಅಕ್ಷೋಭ್ಯ ಭಟ್, ಲಯನ್ ಲೇಡಿ ಕೌನ್ಸಿನ್ ನ ನಿರ್ಗಮನ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಾರ್ಯದರ್ಶಿ ಚಂದ್ರಿಕಾ ರವೀಶ್, ಕೋಶಾಧಿಕಾರಿ ಸುಮಾ ಮುದ್ರಾಡಿ, ನೂತನ ಅಧ್ಯಕ್ಷೆ ಲೊಯ್ಸೆಟಾ ಕರ್ನೇಲಿಯೊ, ಕಾರ್ಯದರ್ಶಿ ಶ್ರೀಲಕ್ಷ್ಮೀ ಭಟ್ ಹಾಗೂ ಕೋಶಾಧಿಕಾರಿ ಸುಷ್ಮಾ ಮಂಜುನಾಥ್ ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ರವೀಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ವಿಜಯ ಕುಮಾರ್ ಮುದ್ರಾಡಿ ವರದಿ ವಾಚಿಸಿದರು, ಅಲೆವೂರು ದಿನೇಶ್ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಮನೋಜ್ ಪ್ರಭು ಧ್ವಜ ವಂದನೆ ಗೈದರು. ನೂತನ ಕಾರ್ಯದರ್ಶಿ ಪ್ರಕಾಶ್ ಎಂ.ಡಿ ಭಟ್ ವಂದಿಸಿದರು.ಅಲೆವೂರು ಹರೀಶ್ ಕಿಣಿ ಹಾಗೂ ರೂಪಾ ಡಿ. ಕಿಣಿ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ರೋಡ್ರಿಗಸ್ ಮತ್ತು ಲೊಯ್ಸೆಟಾ ಕರ್ನೇಲಿಯಾ ಪ್ರಾರ್ಥನೆ ಹಾಡಿದರು.