ಪಡುಕೆರೆ ಬೀಚ್ ನಲ್ಲಿ ಪ್ರವಾಸಿಗರಿಂದ ಸೆಲ್ಫಿ ಶೋಕಿ; ಸ್ವಲ್ಪ ಎಡವಿದರೂ ಸಾವು ಗ್ಯಾರಂಟಿ
ಉಡುಪಿ ಜು.6(ಉಡುಪಿ ಟೈಮ್ಸ್ ವರದಿ): ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಲ್ಪೆ ಪಡುಕೆರೆಯಲ್ಲಿ ಕಡಲಿನ ಅಬ್ಬರ ಜೋರಾಗಿದೆ. ಆದ್ದರಿಂದ ಮಳೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಆದರೆ ಈ ಮಧ್ಯೆ ಕೆಲವು ಪ್ರವಾಸಿಗರು ಸಮುದ್ರ ತಡೆಗೋಡೆಯ ಮಧ್ಯೆ ನಿಂತು, ರಿಸ್ಕಿ ಸೆಲ್ಫಿ ತೆಗೆಯುತ್ತಾ ಇರುವ ದೃಶ್ಯಗಳು ಕಾಣಸಿಗುತ್ತಿದ್ದು, ಸ್ವಲ್ಪ ಎಡವಿದರೂ ಸಾವು ಕಟ್ಟಿಟ್ಟ ಬುತ್ತಿ.
ಹಾಟ್ ಫೆವರೇಟ್ ಆಗಿರುವ ಪಡುಕರೆ ಬೀಚಿನಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ. ಸಾವಿನ ಎದುರಿನಲ್ಲಿ ಸೆಲ್ಫಿ ಶೋಕಿ ಮಾಡುತ್ತಿದ್ದಾರೆ. ಬೀಚ್ ಗಾರ್ಡ್ ಇಲ್ಲದಿರುವ ಕಾರಣ ಪಡುಕೆರೆ ಬೀಚ್ ನಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಅಪಾಯವನ್ನು ಲೆಕ್ಕಿಸದೆ ಸಮುದ್ರ ತಡೆಗೋಡೆಯ ಮಧ್ಯೆ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. ಅಪಾಯದ ತೀವ್ರತೆಯ ಅರಿವಿದ್ದರೂ ಪ್ರವಾಸಿಗರು ಈ ರೀತಿ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ.