ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ರೋವನ್ ಡಿ’ಕೋಸ್ತ ಆಯ್ಕೆ
ಕುಂದಾಪುರ, ಜು.4(ಉಡುಪಿ ಟೈಮ್ಸ್ ವರದಿ): ಹಂಗಳೂರು ಲಯನ್ಸ್ ಕ್ಲಬ್ ನ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ, ಸೈಂಟ್ ಆಂಟನಿ ಕನ್‌ಸ್ಟ್ರಕ್ಷನ್ ಕಂಪೆನಿ ಪಾಲುದಾರ, ಎಂಜಿನಿಯರ್ ಲಯನ್ ರೋವನ್ ಡಿ’ ಕೋಸ್ತ ಅವರು ಆಯ್ಕೆಯಾಗಿದ್ದಾರೆ.
ಲಯನ್ಸ್ 317Cಯಲ್ಲಿ ಹಲವು ಹುದ್ದೆಗಳನ್ನು ಸ್ವೀಕರಿಸಿ ಯಶಸ್ವಿಯಾಗಿ ಸಂಸ್ಥೆಯನ್ನು ಮುನ್ನಡೆಸಿದ ಲಯನ್ ರೋವನ್ ಡಿ’ ಕೋಸ್ತ ಅವರು ತಮ್ಮ ಉದ್ಯಮದ ಜೊತೆ ಹಲವು ಸಾಮಾಜಿಕ, ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ.
ಕಾರ್ಯದರ್ಶಿಯಾಗಿ ಮ್ಯಾಥ್ಯೂ ಜೋಸೆಫ್, ಖಜಾಂಚಿಯಾಗಿ ಪುನೀತ್ ಶೆಟ್ಟಿ ಮತ್ತು ಉಪಕಾರ್ಯದರ್ಶಿ ಆಗಿ ರಮೇಶ್ ಶೆಟ್ಟಿ ಆಯ್ಕೆ ಆಗಿದ್ದು, ಜು.5ರಂದು ಆರ್. ಎನ್. ಶೆಟ್ಟಿ ಸಭಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಟಿ. ಸೋನ್ಸ್ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಈ ಸಂದರ್ಭದಲ್ಲಿ ರೀಜನ್ ಚೇರ್ಮನ್ ಜನ್ನಾಡಿ ಸೋಮನಾಥ್ ಹೆಗ್ಡೆ ಹಾಗೂ ಝೋನ್ ಚೇರ್ ಪರ್ಸನ್ ಎಚ್. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿರಲಿದ್ದಾರೆ.