ಕಾರ್ಕಳ: ಜ್ಞಾನಸುಧಾ ಕಾಲೇಜಿನಲ್ಲಿ ವೃತ್ತಿ ಶಿಕ್ಷಣ ತರಬೇತಿ

ಕಾರ್ಕಳ ಜೂ.29 (ಉಡುಪಿ ಟೈಮ್ಸ್ ವರದಿ): ಕಾರ್ಕಳದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ, ಛತ್ತಿಸ್‌ಘಡ್ ಮೂಲದ ಸಿ.ಎ. ಮತ್ತು ಸಿ.ಎಸ್ ಆಗಿರುವ ಸಾಹಿಲ್ ಶರ್ಮಾ ಅವರು ಪ್ರಸ್ತುತ ದೇಶದಲ್ಲಿ ಲೆಕ್ಕ ಪರಿಶೋಧಕರ ಹಾಗೂ ಕಂಪೆನಿ ಸೆಕ್ರೇಟರಿಗಳ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದೇ ಇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಾಗೂ ವಾಣಿಜ್ಯ ಕ್ಷೇತ್ರದಲ್ಲಿರುವ ವಿಪುಲ ಅವಕಾಶದ ಪ್ರಸ್ತುತ ಸನ್ನಿವೇಶಗಳನ್ನು ದಾಖಲೆಗಳ ಮೂಲಕ ಪ್ರಸ್ತುತ ಪಡಿಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಬಗ್ಗೆ ಇರುವ ಸಂದೇಹಗಳಿಗೆ ಸೂಕ್ತ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಉಡುಪಿಯ ಪ್ರೊ.ಚಂದನ್ ರಾವ್, ಸಂಸ್ಥೆಯ ಉಪಪ್ರಾಂಶುಪಾಲರಾದ ಸಾಹಿತ್ಯ, ಉಪನ್ಯಾಸಕರಾದ ಶೈಲೇಶ್ ಶೆಟ್ಟಿ, ಮಂಜುನಾಥ್ ಮುದೂರು, ವಿಭಾಗ ಮುಖ್ಯಸ್ಥೆ ಸುಮಿತ್ರಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!