ಕೋಟ: ಹೂಡಿಕೆ ಆಮೀಷ-ಮಹಿಳೆಗೆ 18.64 ಲ.ರೂ. ವಂಚನೆ
ಕೋಟ ಜೂ.27(ಉಡುಪಿ ಟೈಮ್ಸ್ ವರದಿ): ಶೇರ್ ಮಾರ್ಕೇಟ್‍ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಂಬಿಸಿ ಮಹಿಳೆಯೊಬ್ಬರಿಗೆ 18.64 ಲ.ರೂ ವಂಚಿಸಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಸೌಮ್ಯ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಇವರಿಗೆ ಫೆ.12 ರಂದು ವಾಟ್ಸ್ಆಪ್ ಮೂಲಕ ಅಪರಿಚಿತ ಯುವತಿಯೊಬ್ಬಳು ಪರಿಚಯಿಸಿಕೊಂಡು ಕರೆ ಮಾಡಿ ತನ್ನದು ಸ್ಟಾಕ್ ಮಾರ್ಕೇಟ್ ಇದ್ದು ತಾನು ಜೆರೋದಾ ಎಂಬ ಕಂಪೆನಿಯಿಂದ ಕಾಲ್ ಮಾಡಿದ್ದಾಗಿ ತಿಳಿಸಿದ್ದಾಳೆ. ಬಳಿಕ ಸ್ಟಾಕ್ ಮಾರ್ಕೇಟ್ ಬಗ್ಗೆ ಮಾಹಿತಿ ನೀಡಿ ವಾಟ್ಸಾಫ್ ನಲ್ಲಿ ಲಿಂಕ್ ನ್ನು ಕಳುಹಿಸಿ ಅಕೌಂಟ್ ಒಪನ್ ಮಾಡಿಸಿದ್ದರು. ಹಾಗೂ ಮಾ.26 ರಂದು ಸೌಮ್ಯ ಅವರ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡು ಅದೇ ದಿನ 50,000/- ಹಣವನ್ನು ಹಾಗೂ ಮಾ. 28 ರಂದು 60,000/- ಹಣ ಹಾಕಲು ತಿಳಿಸಿರುತ್ತಾರೆ. ಇದನ್ನು ನಂಬಿದ ಸೌಮ್ಯ ಅವರು ಆರೋಪಿತರು ಸೂಚಿಸಿದಂತೆ ಹಣ ಕಳುಹಿಸಿದ್ದರು.
ಬಳಿಕ ಆರೋಪಿತರು ಸೌಮ್ಯ ಅವರಿಗೆ 3000/- ಹಣವನ್ನು ಖಾತೆಗೆ ಹಾಕಿದ್ದರು. ಈ ನಡುವೆ ಆರೋಪಿಗಳು ಸೌಮ್ಯ ಅವರಿಗೆ ಜಾಸ್ತಿ ಹಣ ಹಾಕುವಂತೆ ತಿಳಿಸಿದ್ದರು. ಆದರೆ ಇದಕ್ಕೆ ಸೌಮ್ಯ ಅವರು ಒಪ್ಪದೇ ಇದ್ದಾಗ ಆರೋಪಿಗಳು ಸೌಮ್ಯ ಅವರು ಖರೀದಿಸಿದ ಶೇರ್‌ಗಿಂತ ಹೆಚ್ಚಿನ ಶೇರ್ ಹಾಕಿದ್ದರು. ಇದರಿಂದಾಗಿ ಸೌಮ್ಯ ಅವರು ಹಾಕಿದ್ದ ಶೇರ್‍ನ ಹಣ ಅವರಿಗೆ ನೀಡಬೇಕಾಗಿತ್ತು. ಅದಕ್ಕಾಗಿ ಹಂತ ಹಂತವಾಗಿ ಒಟ್ಟು 18, 64,500/- ಹಣವನ್ನು ಲಿಂಕ್ ಮುಖಾಂತರ ಕಳುಹಿಸಿರುತ್ತಾರೆ. ಆದರೆ ಲಿಂಕ್ ನಲ್ಲಿ ಹಾಕಿದ ಹಣವನ್ನು ವಿದ್ ಡ್ರಾ ಮಾಡಲು ಹೋದಾಗ ಗ್ರೂಪಿನಲ್ಲಿ ವೆಬ್ ಸೈಟ್ ಅಫ್ ಗ್ರೇಡ್ ಗೆ ಕೊಟ್ಟಿದ್ದು ಸ್ವಲ್ಪ ದಿನ ಆಗುತ್ತದೆ ಎಂದು ಆರೋಪಿಗಳು ಹೇಳಿರುತ್ತಾರೆ. ಆದರೆ ಮೇ.25 ರಂದು ಗ್ರೂಪನ್ನು ನಿಶ್ಕ್ರೀಯಗೊಳಿಸಿದ್ದು, ಆನಂತರ ಗ್ರೂಪನಲ್ಲಿರುವ ಲಿಂಕ್‍ನ ಮೂಲಕ ಆರೋಪಿಗಳನ್ನು ಸಂಪರ್ಕಿಸಲು ಸಾಧ್ಯವಾಗಿರುವುದಿಲ್ಲ. ಅದರಂತೆ ಶೇರ್ ಮಾರ್ಕೇಟ್‍ನಲ್ಲಿ ಹಣ ಹಾಕಿದರೆ ಅಧಿಕ ಹಣ ನೀಡುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು 18, 64,500/- ಹಣವನ್ನು ಪಡೆದು ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.