ಉಡುಪಿ: ಬ್ಯಾಂಕಿಗೆ ನುಗ್ಗಿ 2.5 ಲಕ್ಷ ರೂ. ಮೌಲ್ಯದ ಚೆಕ್ ಕಳವು

ಉಡುಪಿ, ಜೂ.22: ಭಾರತೀಯ ಸ್ಟೇಟ್ ಬ್ಯಾಂಕ್ ಸಂತೆಕಟ್ಟೆ ಶಾಖೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚೆಕ್ ಕಳವು ಮಾಡಿರುವ ಘಟನೆ ಜೂ.20 ರ ರಾತ್ರಿ ವೇಳೆ ನಡೆದಿದೆ.

ಶಾಖೆಯ ಕಿಟಕಿಯ ಸರಳನ್ನು ಕತ್ತರಿಸಿ ಒಳನುಗ್ಗಿದ ಕಳ್ಳರು, ಕಚೇರಿಯಲ್ಲಿದ್ದ 2,50,000ರೂ. ಮೌಲ್ಯದ ಚೆಕ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!