ಮಣಿಪಾಲ: ಆಘಾತಕಾರಿ ಸುದ್ದಿ, 7 ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ!

ಉಡುಪಿ (ಉಡುಪಿ ಟೈಮ್ಸ್ ವರದಿ): ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಏಳು ರೋಗಿಗಳಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಎಲ್ಲಾ ಏಳು ಮಂದಿ ರೋಗಿಗಳು ಹೊರ ಜಿಲ್ಲೆಯವರಾಗಿದ್ದು, ಇವರಿಗೆ ಸರ್ಜರಿ ಮಾಡಲಾಗಿದೆ. ಪ್ರಸ್ತುತ ಚೇತರಿಕೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಧಾರವಾಡ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹರಿಹರದ ರೋಗಿಗಳಾಗಿದ್ದಾರೆ. ಇವರು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದ ಕೊರೋನಾ ರೋಗಿಗಳು ಎನ್ನಲಾಗಿದೆ.