ಉಡುಪಿಯಲ್ಲಿ ಈದ್ ಸೌಹಾರ್ದ ಕೂಟ

ಉಡುಪಿ ಜೂ.22(ಉಡುಪಿ ಟೈಮ್ಸ್ ವರದಿ): ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ ಈದ್ ಸೌಹಾರ್ದ ಕೂಟವನ್ನು ಆಯೋಜಿಸಲಾಗಿತ್ತು.

ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಳ್ವಾ ಅವರು, ಪ್ರತಿಯೊಂದು ಹಬ್ಬಗಳು ಸಮಾಜದಲ್ಲಿ ಸಂತೋಷವನ್ನು ಹಂಚುತ್ತದೆ. ಕೇವಲ ಮನೆಯವರೇ ಹಬ್ಬ ಆಚರಿಸಿದರೆ ಅದು ಹಬ್ಬ ಅನಿಸುವುದಿಲ್ಲ ಇತರರೊಂದಿಗೆ ಸೇರಿ ಆಚರಿಸಿ ಇತರರ ಮೊಗದಲ್ಲು ಸಂತೋಷ ಖಂಡರೆ ಮಾತ್ರ ಹಬ್ಬ ಎನಿಸುತ್ತದೆ ಎಂದು  ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಬಾಗವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅವರು ಮಾತ‌ನಾಡಿ, ಕರಾವಳಿಯಲ್ಲಿ ಮುಸ್ಲಿಮರ ಕೊಡಗೆ ಬಹಳಷ್ಟು ಇವೆ.‌ ಹಿಂದು ಮುಸ್ಲಿಮ್ ಕ್ರೈಸ್ತರು ಎಲ್ಲರೂ ಸೌಹಾರ್ದತೆಯಿಂದ ಬದುಕು ಕಾಣಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಅವರು, ಜನಾಂಗೀಯತೆ ಎಂಬುದು ಇರಬಾರದು. ನಾನು ಶ್ರೇಷ್ಠ ನೀನು ಕನಿಷ್ಠ ಎಂಬ ಭಾವನ ಯಾವಾಗ ನಮ್ಮಲ್ಲಿ ಮೂಡುತ್ತದೆಯೋ ಆಗ ಜಾನಗೀಯತೆ ಬೆಳೆದುಬರುತ್ತದೆ ಅದರ ಬದಲಾಗಿ ನಾವೆಲ್ಲರೂ ಮಾನವರು ಪರಸ್ಪರ ಸಹೋದರರು ಎಂಬ ಭಾವನ ಸದಾ ನಮ್ಮಲ್ಲಿ ಇರಬೇಕಾಗಿದೆ. ಜಗತ್ತಿನುದ್ದಕ್ಕೂ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಾವು ಇಲ್ಲಿಯವರೆಗೆ ತಲುಪಿದ್ದೇವೆ ಯಾರಾದರೂ ಏನಾದರೂ ಪಡೆಯಬೇಕಿದ್ದರೆ ಅದಕ್ಕೆ ಪರಿಶ್ರಮ ಮತ್ತು ತ್ಯಾಗ ಅತ್ಯಗತ್ಯವಾಗಿದೆ ತ್ಯಾಗ ಅಥವಾ ಬಲಿದಾನ ಮಾಡದಿದ್ದರೆ ಅದರಲ್ಲಿ ಜಯ ಎನ್ನುವುದೇ ಸಿಗುವುದಿಲ್ಲ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷರಾದ ನಿಸಾರ್ ಅಹಮದ್, ಮಹಿಳಾ ವಿಭಾಗದ ಸಂಚಾಲಕಿ ವಾಜಿದಾ ತಬಸ್ಸುಮ್ , ಸರ್ಪರಾಜ್ ಮನ್ನ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!