ಐ.ಎಂ.ಜೆ.ಐ.ಎಸ್.ಸಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ ಜೂ 21 : ಐಎಂಜೆ  ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮೂಡ್ಲಕಟ್ಟೆಯ ಯೋಗ ಮತ್ತು ಆಧ್ಯಾತ್ಮಿಕ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ತರಬೇತುದಾರರಾದ ಪಂಚಕರ್ಮ ಕ್ಲಿನಿಕ್ ಮತ್ತು ಆಯುರ್ವೇದ ಮೆಡಿಸಿನ್ ಕುಂದಾಪುರ,ಇದರ ವೈದ್ಯ ಡಾಕ್ಟರ್ ವಿಜಯಲಕ್ಷ್ಮಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಪ್ರಾಚೀನ ಭಾರತದ ಯೋಗ ಪರಂಪರೆ ಮತ್ತು ಜಗತ್ತು ಯೋಗವನ್ನು ಅಳವಡಿಸಿಕೊಂಡ ಬಗೆಯನ್ನು ವಿವರಿಸಿ, ಯೋಗ ಮತ್ತು ಪ್ರಾಣಾಯಾಮ ದೈನಂದಿನ ಬದುಕಿನಲ್ಲಿ ಹೇಗೆ ಸಹಕರಿಯಾಗಬಹುದು ಎನ್ನುವುದನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಅಸನದ ಪ್ರತ್ಯಕ್ಷಿಕೆಯನ್ನು ಮಾಡಲಾಯಿತು. ಈ ವೇಳೆ ಸಹ ಸಂಸ್ಥೆಯಾದ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ  ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಉಪ ಪ್ರಾಂಶುಪಾಲೆಯವರಾದ ಪ್ರೊ. ರೂಪಶ್ರೀ ಮತ್ತು ಉಪನ್ಯಾಸಕರು ಭಾಗವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಐ. ಎಂ. ಜೆ ಪದವಿ ಕಾಲೇಜಿನ ಪ್ರಾಂಶುಪಾಲೆಯವರಾದ ಡಾI ಪ್ರತಿಭಾ ಎಂ ಪಟೇಲ್ ಅವರು ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಪ್ರೊ. ಜಯಶೀಲ ಕುಮಾರ್, ಯೋಗ ಹಾಗೂ ಅಧ್ಯತ್ಮಿಕ ಸಂಘದ ಸಯೋಜಕರು ಮತ್ತು ಕಾಲೇಜಿನ ದೈಹಿಕ ಶಿಕ್ಷಕರಾದ ಪ್ರವೀಣ್ ಖಾರ್ವಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ  ಪ್ರೊ. ಅರ್ಚನಾ ಗದ್ದೆ, ಎಲ್ಲಾ ಬೋಧಕ ಮತ್ತು ಬೋದಕೇತರ ವೃಂದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!