ಉಡುಪಿಯಲ್ಲಿ ಬಂಜೆತನ ನಿವಾರಣಾ ತಜ್ಞರು
ಉಡುಪಿ ಜೂ.25 (ಉಡುಪಿ ಟೈಮ್ಸ್ ವರದಿ): ನೋವಾ ಐವಿಎಫ್ ಫರ್ಟಿಲಿಟಿ ಮತ್ತು ಉಡುಪಿಯ ಆದರ್ಶ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ಪ್ರತೀ ತಿಂಗಳ 2ನೇ ಗುರುವಾರ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 2.00 ರವರಿಗೆ ಆದರ್ಶ ಆಸ್ಪತ್ರೆಯಲ್ಲಿ “ಬಂಜೆತನ ತಪಾಸಣಾ ಶಿಬಿರ” ನಡೆಯಲಿದೆ.
ಈ ಶಿಬಿರದಲ್ಲಿ ನುರಿತ ತಜ್ಞರಾದ ಡಾ. ಶವೀಝ್ ಫೈಝಿ ಸಲಹೆಗಾರರಾಗಿ ಸಲಹೆ ಸೂಚನೆ ನೀಡಲಿದ್ದಾರೆ. ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಥವಾ ಯಾವುದೇ ಮಾಹಿತಿಗಾಗಿ 9663330864, 8105080073, 8792144608 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.
ಇಲ್ಲಿ ಈ ಕೆಳಗಿನ ಸಮಸ್ಯೆಗಳು ಇದ್ದಲ್ಲಿ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ
ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ ಅಥವಾ ಅನೇಕ ಬಾರಿ ಗರ್ಭಪಾತವಾಗಿದ್ದರೆ, ಅನೇಕ ಐಯುಐ ಅಥವಾ ಐವಿಎಫ್ ವೈಫಲ್ಯತೆ ಹೊಂದಿದ್ದರೆ ಅಥವಾ ವರದಿಗಳು ಸಾಮಾನ್ಯವಾಗಿದ್ದರೂ ಗರ್ಭದರಿಸಲು ಅಸಾಧ್ಯವಾಗಿದ್ದರೆ, ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದು,ಇಲ್ಲದಿರುವುದು ಪಿ ಸಿ ಓ ಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ ಎಂಡೋಮೆಟ್ರಿಯಾಸಿಸ್ ಅಥವಾ ಗರ್ಭಾಶಯದ ಪೈಬ್ರಾಯ್ಡ್ ನಂತಹ ಸಮಸ್ಯೆಯಿದ್ದರೆ ಅಥವಾ ದ್ವಿತೀಯ ಅಭಿಪ್ರಾಯ ಅವಶ್ಯಕತೆ ಇದ್ದಲ್ಲಿ ಸಲಹೆಗಳನ್ನು ನೀಡಲಾಗುವುದು.