ಮುಂಬೈ: ಐಸ್ ಕ್ರೀಮ್‌ನಲ್ಲಿ ಮಾನವನ ಬೆರಳು ಪತ್ತೆ- ಪೊಲೀಸರು ಹೇಳಿದ್ದೇನು?

ಮುಂಬೈ ಜೂ.19 : ಕೆಲ ದಿನಗಳ ಹಿಂದೆ ಮಹಿಳಾ ವೈದ್ಯೆಯೊಬ್ಬರು ಆರ್ಡರ್ ಮಾಡಿದ್ದ ಐಸ್ ಕ್ರೀಮ್‌ನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಬೆರಳು ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಮುಂಬಯಿ ಮೂಲದ ಮಹಿಳಾ ವೈದ್ಯೆಯೊಬ್ಬರು ಆನ್ ಲೈನ್ ಮೂಲಕ ಮೂರೂ ಕೋನ್ ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ಈ ವೇಳೆ ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು ಇದರಿಂದ ಗಾಬರಿಗೊಂಡ ವೈದ್ಯೆ ಪೊಲೀಸ್ ಠಾಣೆಯಲ್ಲಿ ಐಸ್ ಕ್ರೀಮ್ ಕಂಪೆನಿ ವಿರುದ್ಧ ದೂರು ನೀಡಿದ್ದರು. ಇದಾದ ಬಳಿಕ ಐಸ್ ಕ್ರೀಮ್ ನಲ್ಲಿ ಬೆರಳು ಪತ್ತೆಯಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲೇ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ತಪಾಸಣೆ ನಡೆಸಿ ಬಳಿಕ ಕಂಪನಿಯ ಪರವಾನಗಿಯನ್ನು ಅಮಾನತುಗೊಳಿಸಿತ್ತು.

ಕೆಲ ದಿನಗಳ ಹಿಂದೆ ಪುಣೆಯ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಬೆರಳಿಗೆ ಗಾಯಮಾಡಿಕೊಂಡು ಬೆರಳಿನ ಸಣ್ಣ ಭಾಗ ಕಳೆದುಕೊಂಡಿದ್ದ ಎನ್ನಲಾಗಿದೆ. ಹಾಗಾಗಿ ಪೊಲೀಸರು ಐಸ್ ಕ್ರೀಮ್‌ನಲ್ಲಿ ಪತ್ತೆಯಾಗಿರುವ ಬೆರಳು ಇದೇ ಸಿಬ್ಬಂದಿಯದ್ದು ಆಗಿರಬಹುದು ಎಂದು ಹೇಳಿದ್ದಾರೆ.  ಸದ್ಯ ಬಾಲಕನ ಹಾಗೂ ಪತ್ತೆಯಾದ ಬೆರಳಿನ ಡಿಎನ್‌ಎ ಪರೀಕ್ಷೆ ನಡೆಸಬೇಕಾಗಿದ್ದು, ಇದಾದ ಬಳಿಕ ಸ್ಪಷ್ಟ ಚಿತ್ರಣ ಹೊರಬರಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!