ಗಂಗೊಳ್ಳಿ: ತಾಯಿ ಹಾಲು ಕುಡಿದು ಮಲಗಿದ್ದ 43 ದಿನಗಳ ಹಸುಗೂಸು ನಿಧನ
ಗಂಗೊಳ್ಳಿ ಜೂ.18(ಉಡುಪಿ ಟೈಮ್ಸ್ ವರದಿ): ತಾಯಿ ಹಾಲು ಕುಡಿದು ಮಲಗಿದ್ದ 43 ದಿನಗಳ ಹಸುಗೂಸು ಮೃತಪಟ್ಟ ಘಟನೆ ಕುಂದಾಪುರದ ಗುಜ್ಜಾಡಿ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ನೇತ್ರಾವತಿ ಎಂಬವರ ಮಗು ಶಾನ್ಯ (43 ದಿನ) ಮೃತಪಟ್ಟ ಮಗು. ಇಂದು ಬೆಳಿಗ್ಗೆ ತಾಯಿ, ಮಗು ಶಾನ್ಯಗೆ ಹಾಲು ಕುಡಿಸಿ ಮಲಗಿಸಿದ್ದರು. ಬಳಿಕ ಸ್ವಲ್ಪ ಹೊತ್ತಿನ ನಂತರ ಹೋಗಿ ನೋಡಿದಾಗ ಮಗು ಉಸಿರಾಡದೇ ಇದ್ದು ಮಗುವನ್ನು ಮುಟ್ಟಿದಾಗಲೂ ಯಾವುದೇ ಪ್ರತಿಕ್ರಿಯೆ ಇಲ್ಲದೇ ಇದ್ದುದನ್ನು ಕಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.