ಕಾಪು: ಅಕ್ರಮ ಜಾನುವಾರು ಸಾಗಾಟ-ವಾಹನ ಸಹಿತ ಜಾನುವಾರು ವಶ

ಕಾಪು ಜೂ.17 (ಉಡುಪಿ ಟೈಮ್ಸ್ ವರದಿ) : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಎರಡು ವಾಹನವನ್ನು ತಡೆದ ಕಾಪು ಪೊಲೀಸರು 3 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಪು ಠಾಣಾ ಪೊಲೀಸರು ಬಕ್ರೀದ್ ಹಬ್ಬದ ಪ್ರಯುಕ್ತ ಠಾಣಾ ವ್ಯಾಪ್ತಿಯ ಮಣಿಪುರ ಗ್ರಾಮದ ದೆಂದೂರ್ ಕಟ್ಟೆಯಲ್ಲಿನ ಕಟಪಾಡಿ-ಮಣಿಪುರ ರಸ್ತೆಯಲ್ಲಿ ಬ್ಯಾರೀಕೆಡ್ ಗಳನ್ನು ಅಳವಡಿಸಿ ತಾತ್ಕಲಿಕ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕಟಪಾಡಿ ಕಡೆಯಿಂದ ಬಂದ ವಾಹನವನ್ನು ತಡೆದು ಪರಿಶೀಲಿಸಿದಾಗ ವಾಹನದ ಚಾಲಕ ಕನಕಪ್ಪ ವೈ ಹಾಗೂ ಮಾಲಕರಾದ ಗೀತಾ ಇವರು ವಾಹನದ ಕ್ಯಾಬಿನ್‍ನ ಹಿಂಬದಿಯಲ್ಲಿ 2 ಹಸುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಿಸುತ್ತಿದ್ದೂದು ಕಂಡು ಬಂದಿದೆ. ಈ ವೇಳೆ ಪೊಲೀಸರು 2 ಗಿರ್ ತಳಿಯ ದೇಸಿ ಹಸುಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದೆಡೆ ಠಾಣಾ ವ್ಯಾಪ್ತಿಯ ಮಣಿಪುರ ಗ್ರಾಮದ ದೆಂದೂರ್ ಕಟ್ಟೆಯಲ್ಲಿನ ಕಟಪಾಡಿ-ಮಣಿಪುರ ರಸ್ತೆಯಲ್ಲಿ ಮಣಿಪಾಲದ ಕಡೆಯಿಂದ ಬಂದ ವಾಹನವನ್ನು ಪೊಲೀಸರು ನಿಲ್ಲಿಸಿ ಪರಿಶೀಲಿಸಿದಾಗ ಪಾದಿತ ಪ್ರಶಾಂತ ಎಂಬಾತ ವಾಹನದ ಹಿಂಬದಿ 1 ಗಂಡು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ, ಕುತ್ತಿಗೆಗೆ ಬಿಗಿಯಾಗಿ ಹಗ್ಗವನ್ನು ಕಟ್ಟಿ ವಾಹನದ ಪರವಾನಿಗೆಯ ನಿಬಂಧನೆಗಳನ್ನು ಉಲ್ಲಂಘಿಸಿ ಹಿಂಸಾತ್ಮಕ ರೀತಿಯಲ್ಲಿ ಕರುವನ್ನು ವಾಹನದಲ್ಲಿ ತುಂಬಿಸಿರುವುದು ಕಂಡುಬಂದ್ದು ವಾಹನದಲ್ಲಿದ್ದ ಕರುವನ್ನು ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಎರಡೂ ಘಟನೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಎರಡೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!