ಕಾರ್ಕಳ: ಅಕ್ರಮವಾಗಿ ಸಾಗಿಸುತ್ತಿದ್ದ 3 ಯುನಿಟ್ ಮರಳು ವಶ
ಕಾರ್ಕಳ ಜೂ.17 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಕೌಡೂರು ಗ್ರಾಮದ ಬೈಲೂರು ಕೆಫೆ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವನ್ನು ತಡೆದ ಪೊಲೀಸರು 3 ಯುನಿಟ್ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ನಗರ ಠಾಣಾ ಪೊಲೀಸರು ಇಂದು ಬೆಳಿಗ್ಗೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಬೈಲೂರು ಕೆಫೆ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪ್ರವೀಣ್ ಕಾರ್ಕಳ, ಇಮ್ರಾನ್ ಅಡ್ಡೂರು ಮತ್ತು ಸುರೇಶ ಎಂಬವ ಮೂವರನ್ನು ಹಾಗೂ ಟಿಪ್ಪರ್ ಲಾರಿ ಸಹಿತ 3 ಯುನಿಟ್ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಂಗಳೂರು ತಾಲೂಕಿನ ಅಡ್ಡೂರು ಹೊಳೆಯ ಸರಕಾರಿ ಸ್ಥಳದಲ್ಲಿ ಇರುವ ಮರಳು ಕಳವು ಮಾಡಿಕೊಂಡು ಯಾವುದೇ ಪರವಾನಿಗೆ ಹೊಂದದೇ ಟಿಪ್ಪರ ಲಾರಿಯಲ್ಲಿ ಸಾಗಿಸುತ್ತಿದ್ದೂದು ಕಂಡುಬಂದಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.